ಶೀಘ್ರದಲ್ಲೇ ಆಹಾರ ನಿಗಮದ 386 ನೂತನ ಸಿಬ್ಬಂದಿ ನೇಮಕಾತಿ ಪತ್ರ ವಿತರಣೆ



(ನ್ಯೂಸ್ಕಡಬ) newskadaba.com,  ನ.01 ಬೆಂಗಳೂರು: ಆಹಾರ ನಿಗಮದಲ್ಲಿ ನೇಮಕಾತಿ ಪ್ರಕ್ರಿಯೆ ನಡೆದಿದ್ದು, ಶೀಘ್ರದಲ್ಲೇ ಆಹಾರ ನಿಗಮದ 386 ನೂತನ ಸಿಬ್ಬಂದಿಯ ನೇಮಕಾತಿ ಪತ್ರ ವಿತರಣೆ ಮಾಡಲಾಗುವುದು ಎಂದು ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ ತಿಳಿಸಿದರು.





ವಸಂತನಗರದ ಅಬ್ದುಲ್‌ಕಲಾಂ ಭವನದಲ್ಲಿ ನಡೆದ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದ 52ನೇ ವರ್ಷದ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಮೊದಲು ನಿಮಗದಲ್ಲಿ 1500 ಸಾವಿರ ಸಿಬ್ಬಂದಿ ಇದ್ದರು. 200ರಿಂದ 250ಕ್ಕೆ ಇಳಿದಿದೆ. ನೇಮಕಾತಿ ಪ್ರಕ್ರಿಯೆ ನಡೆದಿದೆ. ಮುಖ್ಯಮಂತ್ರಿಗಳು ಈ ನೇಮಕಾತಿ ಆದೇಶಕ್ಕೆ ಅನುಮತಿ ನೀಡಿದ್ದು ಕೆಲವೇ ದಿನಗಳಲ್ಲಿ ಸಿಬ್ಬಂದಿಗೆ ನೇಮಕಾತಿಪತ್ರ ನೀಡಲಾಗುವುದು ಎಂದರು.






ಈ ಸಂದರ್ಭದಲ್ಲಿ ನಿಗಮದ ಅಧ್ಯಕ್ಷರಾದ ಬಿ.ಜಿ.ಗೋವಿಂದಪ್ಪ, ಮಾಜಿ ಸಂಸದರಾದ ಚಂದ್ರಪ್ಪ, ಆಯುಕತ್ತರಾದ ವಿ.ವಿ.ಜೋತ್ಸನಾ, ನಿಗಮದ ನಿರ್ದೇಶಕರಾದ ಕೆ.ಜಗದೀಶ್‌, ಸಚಿವರ ಆಪ್ತ ಕಾರ್ಯದರ್ಶಿ ಡಾ.ಹೆಚ್‌.ನಟರಾಜ್‌, ವ್ಯವಸ್ಥಾಪಕರಾದ ಮಂಜುನಾಥ್‌,ರಾಘವೇಂದ್ರ, ವೈದ್ಯರಾದ ಆಂಜನಪ್ಪ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

error: Content is protected !!
Scroll to Top