(ನ್ಯೂಸ್ ಕಡಬ) newskadaba.com, ಅ.30 ಬೀದರ್: ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಸಿರಗಾಪೂರ ಗ್ರಾಮದಲ್ಲಿ ದಿನಾಂಕ ೦೨. ೧೧.೨೦೨೫ ರಂದು ರವಿವಾರ ಬೆಳಗ್ಗೆ ೧೧ ಗಂಟೆಗೆ ”ಶಿವಾಚಾರ್ಯ ರತ್ನ” ”ಧರ್ಮರತ್ನ” “ದಾಸೋಹ ರತ್ನ”
“ಸದ್ದರ್ಮ ಶಿಖಾಮಣಿ” ”ಸಮನ್ವಯ ಸಂತ” ಪರಮ ಪೂಜ್ಯ ಶ್ರೀ ಷ. ಬ್ರ. ಡಾ. ಚನ್ನವೀರ ಶಿವಾಚಾರ್ಯರು ಸಂಸ್ಥಾನ ಹಿರೇಮಠ, ಸುಕ್ಷೇತ್ರ ಹಾರಕೂಡ ಇವರ ೬೩ ಜನ್ಮದಿನೋತ್ಸವ ಮತ್ತು ತುಲಾಭಾರ ಕಾರ್ಯಕ್ರಮ ಜರುಗಲಿದೆ.
ಸಮಾರಂಭದ ಸಮ್ಮುಖವನ್ನು ಪೂಜ್ಯ ಶ್ರೀ ಮ.ನಿ.ಪ್ರ. ಶಿವಲಿಂಗ ಮಹಾಸ್ವಾಮಿಗಳು ಸಂಸ್ಥಾನ ಮಠ ಖೇಳಗಿ ವಹಿಸುವರು.
ಬಸವಕಲ್ಯಾಣ ಶಾಸಕರಾದ ಸನ್ಮಾನ್ಯ ಶ್ರೀ ಶರಣು ಸಲಗರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.ಸನ್ಮಾನ್ಯ ಶ್ರೀ ಈಶ್ವರ ಬಿ. ಖಂಡ್ರೆ, ಅರಣ್ಯ ಜೀವಶಾಸ್ತ್ರ ಮತ್ತು ಪರಿಸರ ಸಚಿವರು ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರು ಕರ್ನಾಟಕ ಸರ್ಕಾರ ಇವರು ಸಮಾರಂಭ ಉದ್ಘಾಟಿಸಲಿದ್ದಾರೆ.
ಮುಖ್ಯ ಅಥಿತಿಗಳಾಗಿ ಸನ್ಮಾನ್ಯ ಶ್ರೀ ಸಾಗರ ಖಂಡ್ರೆ,ಲೋಕಸಭಾ ಸದಸ್ಯರು ಬೀದರ.ಸನ್ಮಾನ್ಯ ಶ್ರೀ ಬಿ. ಆರ್. ಪಾಟೀಲ
ಶಾಸಕರು ಅಳಂದ.ಸನ್ಮಾನ್ಯ ಶ್ರೀ ಮಾರುತಿರಾವ ಮುಳೆ,ವಿಧಾನ ಪರಿಷತ್ ಸದಸ್ಯರುಸನ್ಮಾನ್ಯ ಡಾ|| ಸಿದ್ದಲಿಂಗಪ್ಪ ಪಾಟೀಲ ಶಾಸಕರು ಹುಮನಾಬಾದ.ಸನ್ಮಾನ್ಯ ಶ್ರೀ ಬಸವರಾಜ ಮತ್ತಿಮೂಡ,ಶಾಸಕರು ಕಲಬುರಗಿ ಗ್ರಾಮೀಣ ಮತಕ್ಷೇತ್ರ.ಸನ್ಮಾನ್ಯ ಡಾ|| ಅವಿನಾಶ ಜಾಧವ ಶಾಸಕರು ಚಿಂಚೋಳಿ.ಸನ್ಮಾನ್ಯ ಶ್ರೀ ಚಂದ್ರಶೇಖರ ಪಾಟೀಲ ವಿಧಾನ ಪರಿಷತ್ ಸದಸ್ಯರು,ಸನ್ಮಾನ್ಯ ಶ್ರೀ ಭೀಮರಾವ ಪಾಟೀಲ ವಿಧಾನ ಪರಿಷತ್ ಸದಸ್ಯರು ಭಾಗವಹಿಸುವರು.












