(ನ್ಯೂಸ್ ಕಡಬ) newskadaba.com ಕಾಪು, ಎ.29. ಪ್ರವಾಸಕ್ಕೆಂದು ಆಗಮಿಸಿದ್ದ ತಂಡವೊಂದು ನೀರಿನಲ್ಲಿ ಆಡುತ್ತಿದ್ದಾಗ ಯುವಕನೋರ್ವ ನೀರು ಪಾಲಾದ ಘಟನೆ ಕಾಪು ಬೀಚ್ ನಲ್ಲಿ ಶನಿವಾರದಂದು ಸಂಜೆ ನಡೆದಿದೆ.
ನೀತು ಪಾಲಾದ ಯುವಕನನ್ನು ಕಿಶೋರ್ (17) ಎಂದು ಗುರುತಿಸಲಾಗಿದೆ. ಮೂವರು ಮಹಿಳೆಯರು ಹಾಗೂ ನಾಲ್ವರು ಪುರುಷರ ತಂಡ ಕಾಪು ಬೀಚ್ ನಲ್ಲಿ ಸಮುದ್ರಕ್ಕಿಳಿದು ನೀರಾಟದಲ್ಲಿ ತೊಡಗಿದ್ದ ಸಂದರ್ಭದಲ್ಲಿ ಕಿಶೋರ್ ಹಾಗೂ ಭರತ್ ಸಮುದ್ರದ ಅಲೆಗಳ ಸೆಳೆತಕ್ಕೆ ಸಿಲುಕಿ ಕಿಶೋರ್ ನೀರು ಪಾಲಾಗಿದ್ದು, ಭರತ್ ನನ್ನು ರಕ್ಷಿಸಲಾಗಿದೆ. ಕಿಶೋರ್ ದೇಹಕ್ಕೆ ಹುಡುಕಾಟ ನಡೆಯುತ್ತಿದ್ದು ಕಾಪು ಪೊಲೀಸ್ ಠಾಣಾ ಸಿಬ್ಬಂದಿಗಳು ಸ್ಥಳದಲ್ಲಿ ಠಿಕಾಣಿ ಹೂಡಿದ್ದಾರೆ.
Also Read ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಭೆ ➤ ಕಸ್ತೂರಿ ರಂಗನ್ ವರದಿ ಬಾದಿತ ಗ್ರಾ. ಪಂ ಎದುರು ಧರಣಿ ಸತ್ಯಾಗ್ರಹ.!