ಮತ್ತೆ ಏರಿದ ಚಿನ್ನದ ದರ



(ನ್ಯೂಸ್ಕಡಬ) newskadaba.com,  .29 ಬೆಂಗಳೂರು: ಚಿನ್ನಾಭರಣ ದರ ನಿರಂತರವಾಗಿ 10 ದಿನ ಇಳಿಕೆ ಆಗಿತ್ತು. ಆದರೆ ಇಂದು ಮತ್ತೆ ಹೆಚ್ಚಾಗುವ ಮೂಲಕ ಚಿನ್ನದ ದರ ಇಳಿಕೆಯ ನಿರೀಕ್ಷೆಯಲ್ಲಿದ್ದ ಜನರಿಗೆ ನಿರಾಸೆ ತರಿಸಿದೆ.





ಶುದ್ಧ ಚಿನ್ನದ ಇಂದಿನ ದರ ಎಷ್ಟಿದೆ?
ಅಕ್ಟೋಬರ್ 29 ರಂದು ಬುಧವಾರದಂದು, ದೇಶೀಯ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂ ಒಂದಕ್ಕೆ 12,158 ರೂಪಾಯಿ ಇದ್ದು, ಇಂದು 76 ರೂಪಾಯಿ ಹೆಚ್ಚಳ ಆಗಿದೆ. 10 ಗ್ರಾಂ ಶುದ್ಧ ಚಿನ್ನಕ್ಕೆ 1,21,580 ರೂಪಾಯಿ ಇದೆ. 24 ಕ್ಯಾರೆಟ್ ಬೆಲೆಯಲ್ಲಿ 760 ರೂ ಏರಿಕೆ ಆಗಿದೆ.






22 ಕ್ಯಾರೆಟ್ ಚಿನ್ನದ ಬೆಲೆ

22 ಕ್ಯಾರೆಟ್ 1 ಗ್ರಾಂ ಬೆಲೆ 11,145 ರೂಪಾಯಿ ಇದ್ದು, 70 ರೂ ಹೆಚ್ಚಳ ಕಂಡಿದೆ. 10 ಗ್ರಾಂ ಬೆಲೆ 1,11,450 ರೂಪಾಯಿ ಇದೆ. ಇಂದು 570 ರೂ ಹೆಚ್ಚಳ ಆಗಿದೆ.

ಬೆಂಗಳೂರಿನ ಚಿನ್ನ-ಬೆಳ್ಳಿ ದರ ಎಷ್ಟಿದೆ?
ಬೆಂಗಳೂರಲ್ಲಿ 1 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 12158 ರೂಪಾಯಿ ಇದ್ದು, 10 ಗ್ರಾಂ ಶುದ್ಧ ಚಿನ್ನಕ್ಕೆ 1,21,580 ರೂಪಾಯಿ ಇದೆ. ಈ ಬೆಲೆಯಲ್ಲಿ ಜಿಎಸ್‌ಟಿ ಸೇರಿಲ್ಲ, ಹೀಗಾಗಿ ಮಳಿಗೆಗಳಲ್ಲಿ ವ್ಯತ್ಯಾಸ ಇರಲಿದೆ.

ಬೆಳ್ಳಿ ಬೆಲೆ ತಟಸ್ಥ
ಬೆಳ್ಳಿ ಬೆಲೆ ಇಂದು ತಟಸ್ಥವಾಗಿದ್ದು, 1 ಗ್ರಾಂ ಬೆಲೆ 152 ರೂ ಇದ್ದು, ಕೆಜಿಗೆ 1,52,000 ರೂ ಇದೆ.

error: Content is protected !!
Scroll to Top