ಬೇಕಾಗುವ ಸಾಮಾಗ್ರಿಗಳು :
ಬಾದಾಮಿ(6)
ಗೋಡಂಬಿ(6)
ಅಕ್ರೋಡು(6)
ಗೇರುಬೀಜ(6)
ಪಿಸ್ತಾ(6)
ಒಣ ದ್ರಾಕ್ಷಿ(20)
ಹಾಲು(3 ಲೋಟ)
ಗೋದಿ ಹಿಟ್ಟಿನ ಶಾವಿಗೆ(¾ ಲೋಟ)
ಸಕ್ಕರೆ(¾ ಲೋಟ)
ತುಪ್ಪ(2-3 ಚಮಚ)
ಗಸಗಸೆ(2 ಚಮಚ)
ಜಾಜಿಕಾಯಿ(ಸ್ವಲ್ಪ)
ಏಲಕ್ಕಿ(4)
ಕೇಸರಿ(4 ದಳ)
ಮಾಡುವ ವಿಧಾನ:
ಹಿಂದಿನ ದಿನ ಗಸಗಸೆ, ಕೇಸರಿದಳವನ್ನು ಬಿಟ್ಟು ಉಳಿದ ಒಣಹಣ್ಣುಗಳನ್ನು ನೀರಿನಲ್ಲಿ ನೆನೆ ಹಾಕಿ. ಏಲಕ್ಕಿ, ಜಾಜಿಕಾಯಿಯನ್ನು ಪುಡಿ ಮಾಡಿ ಇಟ್ಟುಕೊಳ್ಳಿ. ನೆನೆ ಹಾಕಿದ ಒಣಹಣ್ಣುಗಳನ್ನು ಸಣ್ಣಗೆ ಕತ್ತರಿಸಿ ಇಡಿ. ಒಂದು ಚಮಚ ತುಪ್ಪ ಹಾಕಿ ಬಾಣಲೆಯಲ್ಲಿ ಇದನ್ನು ಚೆನ್ನಾಗಿ ಹುರಿದುಕೊಳ್ಳಿ. ನಂತರ ಇನ್ನೊಂದು ಚಮಚ ತುಪ್ಪ ಹಾಕಿ ಶಾವಿಗೆ ಹುರಿದು ತೆಗೆದಿಡಿ. ಒಂದು ಪಾತ್ರೆಗೆ ಹಾಲು ಹಾಕಿ ಕಾಯಲು ಇಡಿ. ಇದಕ್ಕೆ ಕೇಸರಿ ದಳಗಳನ್ನು ಸೇರಿಸಿ. ಹಾಲು ಕುದಿಯುವಾಗ ಶಾವಿಗೆ ಸೇರಿಸಿ ಕುದಿಯಲು ಇಡಿ. ನಂತರ ಇದಕ್ಕೆ ಸಕ್ಕರೆ, ಗಸಗಸೆ, ಏಲಕ್ಕಿ ಜಾಜಿಕಾಯಿ ಪುಡಿ ಹಾಗು ಅರ್ಧದಷ್ಟು ಒಣಹಣ್ಣುಗಳನ್ನು ಹಾಕಿ ಬೆರೆಸಿ ಸ್ವಲ್ಪ ಕುದಿಸಿಕೊಳ್ಳಿ. ಈಗ ಗೋದಿ ಹಿಟ್ಟಿನ ಶಾವಿಗೆ ಸವಿಯಲು ರೆಡಿ. ಸರ್ವ್ ಮಾಡುವ ಮುನ್ನ ಉಳಿದ ಒಣಹಣ್ಣುಗಳನ್ನು ಹಾಕಿ ಸರ್ವ್ ಮಾಡಿ.