ರಾಜ್ಯದಲ್ಲಿ ಅರೆ ವೈದ್ಯಕೀಯ ಮಂಡಳಿ ನಿಷ್ಕ್ರಿಯ: ವಿದ್ಯಾರ್ಥಿಗಳು, ಕಾಲೇಜುಗಳಿಂದ ತೀವ್ರ ಅಸಮಾಧಾನ



(ನ್ಯೂಸ್‌ ಕಡಬ) newskadaba.com,  ಅ..24: ಕೊರೋನಾದಂತಹ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಶ್ರಮಿಸಿದವರಲ್ಲಿ ಅರೆ ವೈದ್ಯಕೀಯ ಸಿಬ್ಬಂದಿ ಪಾತ್ರ ಮಹತ್ವದ್ದು. ಅಂತಹ ಸಿಬ್ಬಂದಿಯನ್ನು ತಯಾರು ಮಾಡುವ ಅರೆ ವೈದ್ಯಕೀಯ ಮಂಡಳಿಯು ಪ್ರವೇಶ ಪ್ರಕ್ರಿಯೆಯಿಂದ ಹಿಡಿದು ಪರೀಕ್ಷೆ, ಅಂಕಪಟ್ಟಿ ಮುದ್ರಣವರೆಗೂ ಯಾವೊಂದು ಚಟುವಟಿಕೆಯನ್ನೂ ಶೈಕ್ಷಣಿಕ ವೇಳಾಪಟ್ಟಿಯಂತೆ ನಿರ್ವಹಿಸದೆ ಕೆಲ ವರ್ಷಗಳಿಂದ ಆಮೆಗತಿ ಅನುಸರಿಸುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಪ್ರಮುಖವಾಗಿ ಪ್ಯಾರಾ ಮೆಡಿಕಲ್‌ ಕಾಲೇಜುಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಪ್ರವೇಶ ಅನುಮೋದನೆಗೆ ಮಂಡಳಿ ಸುಮಾರು ಆರು ತಿಂಗಳಿಗೂ ಹೆಚ್ಚಿನ ಕಾಲ ತೆಗೆದುಕೊಳ್ಳುತ್ತಿದೆ. 2024-25ನೇ ಶೈಕ್ಷಣಿಕ ಸಾಲಿನ ಪ್ರವೇಶ ಪಡೆದ ವಿದ್ಯಾರ್ಥಿಗಳ ಮಾಹಿತಿಯನ್ನು ವೇಳಾಪಟ್ಟಿಯಂತೆ ಫೆಬ್ರವರಿಯಲ್ಲೇ ದಾಖಲೆಗಳ ಸಹಿತ ಕಾಲೇಜುಗಳು ಸಲ್ಲಿಸಿದ್ದರೂ ಮಂಡಳಿ ಮಾತ್ರ ಅನೇಕ ವಿದ್ಯಾರ್ಥಿಗಳಿಗೆ ಇನ್ನೂ ಪ್ರವೇಶ ಅನುಮೋದನೆ ನೀಡಿ ನೋಂದಣಿ ಸಂಖ್ಯೆಯನ್ನೇ ನೀಡಿಲ್ಲ.





ಪರೀಕ್ಷೆ ಸಮೀಪಿಸಿದರೂ ನೋಂದಣಿ ಖಾತರಿಪಡಿಸದ ಮಂಡಳಿ ಕ್ರಮಕ್ಕೆ ಕಾಲೇಜುಗಳ ಆಡಳಿತ ಮಂಡಳಿಗಳ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ. ನೋಂದಣಿ ಸಂಖ್ಯೆ ನೀಡಿಕೆ ವಿಳಂಬದಿಂದ ಪರಿಶಿಷ್ಟ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನದಿಂದ ವಂಚಿತರಾಗುವ ಆತಂಕ ಎದುರಿಸುತ್ತಿದ್ದಾರೆ. ಇನ್ನು, ಮಂಡಳಿಯೇ ಪ್ರಕಟಿಸಿರುವ 2025-26ನೇ ಶೈಕ್ಷಣಿಕ ಸಾಲಿನ ವೇಳಾಪಟ್ಟಿ ಪ್ರಕಾರ, ಯಾವುದೇ ಪ್ಯಾರಾ ಮೆಡಿಕಲ್‌ ಕೋರ್ಸು ಪ್ರವೇಶಕ್ಕೆ ಸೆ.30 ಕೊನೆಯ ದಿನವಾಗಿದ್ದು, ಅ.1ರಿಂದ ತರಗತಿಗಳು ಆರಂಭವಾಗಬೇಕಿತ್ತು. ಆದರೆ ಇನ್ನೂ ಸರ್ಕಾರಿ ಕಾಲೇಜು, ಖಾಸಗಿ ಕಾಲೇಜುಗಳಲ್ಲಿನ ಸರ್ಕಾರಿ ಕೋಟಾ ಸೀಟುಗಳ ಪ್ರವೇಶ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಕೌನ್ಸೆಲಿಂಗ್‌ ಪ್ರಕ್ರಿಯೆ ಮಂದಗತಿಯಲ್ಲಿ ಸಾಗುತ್ತಿದೆ.






 

error: Content is protected !!
Scroll to Top