ವರ್ಕ್ ಫ್ರಂ ಹೋಮ್ ಹೆಸರಿನಲ್ಲಿ 8,000 ಕ್ಕೂ ಹೆಚ್ಚು ಮಹಿಳೆಯರಿಗೆ ಕೋಟ್ಯಾಂತರ ರೂ. ವಂಚನೆ



(ನ್ಯೂಸ್ಕಡಬ) newskadaba.com,  ..24: ಮಹಿಳೆಯರಿಗೆ ವರ್ಕ್​ ಫ್ರಂ ಹೋಮ್ ಕೆಲಸ ನೀಡುವ ಹೆಸರಿನಲ್ಲಿ ಮಹಾರಾಷ್ಟ್ರದ ವ್ಯಕ್ತಿಯೊಬ್ಬರು ಬೆಳಗಾವಿಯಲ್ಲಿ ಸಾವಿರಾರು ಮಹಿಳೆಯರನ್ನು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.





ಸುಮಾರು 8000 ಮಹಿಳೆಯರಿಂದ 12 ಕೋಟಿ ರೂ. ಹಣ ಪಡೆದ ವಂಚಕ ಸದ್ದಿಲ್ಲದೆ ಪರಾರಿಯಾಗಿದ್ದಾನೆ. ಈ ಕುರಿತು ವಂಚಿತ ಮಹಿಳೆಯರು ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯನ್ನು ಬಂಧಿಸಿ ತಮ್ಮ ಹಣವನ್ನು ಹಿಂತಿರುಗಿಸಲು ಒತ್ತಾಯಿಸಿದ್ದಾರೆ. ಆಘಾತಕಾರಿ ಸಂಗತಿಯೆಂದರೆ, ಕೆಲವು ಪ್ರಭಾವಿ ಮಹಿಳೆಯರು ಸಹ ಈ ವಂಚನೆಯ ಯೋಜನೆಯಲ್ಲಿ ಲಕ್ಷಗಟ್ಟಲೆ ಹೂಡಿಕೆ ಮಾಡುವ ಮೂಲಕ ಮೋಸ ಹೋಗಿದ್ದಾರೆ.






ಸೊಲ್ಲಾಪುರದಲ್ಲಿ ನೆಲೆಸಿರುವ ವ್ಯಕ್ತಿಯೊಬ್ಬ ಅಗರಬತ್ತಿ ಪ್ಯಾಕ್ ಮಾಡುವ ಮೂಲಕ ಹಣ ಗಳಿಬಹುದುದೆಂದು ಹೇಳಿ ತಮ್ಮನ್ನು ವಂಚಿಸಿದ್ದಾನೆ ಎಂದು ಆರೋಪಿಸಿದ್ದಾರೆ. ಮಹಾರಾಷ್ಟ್ರದ ಬಾಬಾಸಾಹೇಬ್ ಕೋಲೇಕರ್ ತನ್ನನ್ನು ಅಜಯ್ ಪಾಟೀಲ್ ಎಂದು ಪರಿಚಯಿಸಿಕೊಂಡಿದ್ದ.

ಒಬ್ಬ ಮಹಿಳೆಯಿಂದ ಒಂದು ಗುರುತಿನ ಚೀಟಿ ರಚಿಸಲು 2,500 ರಿಂದ 5,000 ರೂ.ಗಳವರೆಗೆ ಹಣವನ್ನು ಸಂಗ್ರಹಿಸಿದ್ದ. ಪ್ರತಿಯೊಬ್ಬ ನೇಮಕಾತಿದಾರರು ಚೈನ್-ಮಾರ್ಕೆಟಿಂಗ್ ವ್ಯವಸ್ಥೆಯಡಿಯಲ್ಲಿ ಇನ್ನಿಬ್ಬರು ವ್ಯಕ್ತಿಗಳನ್ನು ಸಂಪರ್ಕಿಸುವಂತೆ ಒತ್ತಾಯಿಸಿದ್ದ ಎಂದು ಮಹಿಳೆಯರು ಆರೋಪಿಸಿದ್ದಾರೆ. ಅವನ ನಿಜವಾದ ಹೆಸರು ಸೋಲಾಪುರದ ಬಾಬಾಸಾಹೇಬ್ ಕೋಲೇಕರ್ ಎಂದು ಹೇಳಲಾಗುತ್ತದೆ ಆತಸೋಲಾಪುರ ಮೂಲದವನು ಎಂದು ತಿಳಿದು ಬಂದಿದೆ.

 

error: Content is protected !!
Scroll to Top