ಕೇರಳಕ್ಕೆ ತೆರಳುತ್ತಿದ್ದ ಖಾಸಗಿ ಬಸ್ಸನ್ನು ಹೈಜಾಕ್‌ ಮಾಡಿದ ನಾಲ್ವರು ದುಷ್ಕರ್ಮಿಗಳು ► ಬಸ್ಸನ್ನು ಅಡಗಿಸಿ ಇಟ್ಟಿದ್ದಾದರೂ ಎಲ್ಲಿ ಎಂದು ಗೊತ್ತೇ…?

(ನ್ಯೂಸ್ ಕಡಬ) newskadaba.com ಬೆಂಗಳೂರು, ಎ.28. ಕೇರಳಕ್ಕೆ ತೆರಳುತ್ತಿದ್ದ ಖಾಸಗಿ ಬಸ್ಸನ್ನು ಪೊಲೀಸರ ಸೋಗಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಹೈಜಾಕ್ ಮಾಡಿದ ಘಟನೆ ಶುಕ್ರವಾರ ರಾತ್ರಿ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನಿಂದ ಕೇರಳಕ್ಕೆ ತೆರಳುತ್ತಿದ್ದ ಖಾಸಗಿ ಬಸ್ಸನ್ನು ಮೈಸೂರ್‌ ರೋಡ್‌ನ‌ ಆರ್‌ವಿ ಕಾಲೇಜ್‌ ಬಳಿ ಅಡ್ಡಗಟ್ಟಿದ ನಾಲ್ವರು ದುಷ್ಕರ್ಮಿಗಳ ತಂಡ ಚಾಲಕನನ್ನು ಕೆಳಗಿಳಿಸಿ ಬಸ್ಸನ್ನು ಹೈಜಾಕ್‌ ಮಾಡಿ ಆರ್‌.ಆರ್‌.ನಗರದ ಗೋದಾಮೊಂದರಲ್ಲಿ ಇರಿಸಿದ್ದಾರೆ. ಬಸ್‌ ಗೋದಾಮಿನಲ್ಲಿ ಇರುವುದನ್ನು ಕಂಡು ಕಂಗಾಲಾದ ಪ್ರಯಾಣಿಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣವೇ ಕಾರ್ಯ ಪ್ರವೃತ್ತರಾದ ಪೊಲೀಸರು ಪಶ್ಚಿಮ ವಲಯ ಡಿಸಿಪಿ  ರವಿ ಸಿ ಚನ್ನಣ್ಣನವರ್‌ ಮಾರ್ಗದರ್ಶನದಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಿ ಪ್ರಯಾಣಿಕರನ್ನು ಬಂಧಮುಕ್ತಗೊಳಿಸಿದರು. ಹಣಕಾಸು ವಿಚಾರಕ್ಕೆ ಬಸ್‌ ಹೈಜಾಕ್‌ ಮಾಡಿದ್ದಾರೆ ಎನ್ನಲಾಗಿದ್ದು, ಅಕ್ರಮವಾಗಿ ಬಸ್‌ ತಡೆ ಹಿಡಿದು ಪ್ರಯಾಣಿಕರಿಗೆ ತೊಂದರೆ ನೀಡಿದ ಆರೋಪಿಗಳ ವಿರುದ್ದ ಆರ್‌ಆರ್‌ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಸ್ಯಾಂಡಲ್ ವುಡ್- ಲೈಂಗಿಕ ಕಿರುಕುಳದ ಕುರಿತ ತನಿಖೆಗೆ ಆಗ್ರಹ- ಸಮಿತಿ ರಚನೆಗೆ ಸಿಎಂಗೆ ಮನವಿ ಸಲ್ಲಿಸಿದ ‘FIRE’

error: Content is protected !!
Scroll to Top