ಮೊಬೈಲ್ ಸ್ಫೋಟ: ಪ್ರಾಣಾಪಾಯದಿಂದ ಪಾರು



(ನ್ಯೂಸ್ಕಡಬ) newskadaba.com,  ..24 : ಮೊಬೈಲ್‌ ಸ್ಫೋಟದಿಂದಾಗಿ ಗಂಭೀರವಾಗಿ ಗಾಯಗೊಂಡು ಬಹುಅಂಗಾಂಗ ಹಾನಿಗೊಳಗಾಗಿದ್ದ 19 ವರ್ಷದ ಯುವಕನನ್ನು ಪ್ರಾಣಾಪಾಯದಿಂದ ಪಾರು ಮಾಡುವಲ್ಲಿ ನಗರದ ಸ್ಪರ್ಶ್‌ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿದ್ದಾರೆ. ತನ್ನ ಮನೆಯಲ್ಲಿ ಮೊಬೈಲ್‌ ನೋಡುತ್ತಿದ್ದಾಗ 19 ವರ್ಷದ ಯುವಕ ಪ್ರಥಮ್‌ (ಹೆಸರು ಬದಲಿಸಲಾಗಿದೆ) ಮೊಬೈಲ್‌ ಅಕಸ್ಮಾತ್‌ ಸ್ಫೋಟಿಸಿತ್ತು.. ಮಧುಮೇಹದಿಂದಲೂ ಬಳಲುತ್ತಿದ್ದ ಪ್ರಥಮ್‌ರನ್ನು ತಕ್ಷಣ ಇನ್‌ಫ್ಯಾಂಟ್ರಿ ರಸ್ತೆಯ ಸ್ಪರ್ಶ್‌ ಆಸ್ಪತ್ರೆಗೆ ಕರೆ ತರಲಾಗಿತ್ತು. ತಮ್ಮ ಪುತ್ರ ಮನೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು ಆತನ ಮುಖದ ತುಂಬಾ ಕಪ್ಪು ಮಸಿ ತುಂಬಿಕೊಂಡು ಮುಖದ ತುಂಬ ಗಾಯಗಳಾಗಿ ಬಲ ಗೈ ಊದಿಕೊಂಡಿದ್ದನ್ನು ಕಂಡ ಪ್ರಥಮ್‌ ತಂದೆ ಆಸ್ಪತ್ರೆಗೆ ದಾಖಲಿಸಿದ್ದರು.





ತಕ್ಷಣ ಕಾರ್ಯಪ್ರವೃತ್ತವಾದ ಸ್ಪರ್ಶ್‌ ಆಸ್ಪತ್ರೆಯ ಬಹು ವಿಭಾಗೀಯ ತಜ್ಞ ವೈದ್ಯರ ತಂಡ ಯುವಕನು ಮೊಬೈಲ್‌ ಸ್ಫೋಟದಿಂದಾಗಿ ಡಯಾಬಿಟಿಕ್‌ ಕೀಟೋ ಅಸಿಡೋಸಿಸ್‌ ಎಂಬ ಮಾರಣಾಂತಿಕ ಸ್ಥಿತಿಗೆ ತಲುಪಿದ್ದನ್ನು ಪತ್ತೆ ಮಾಡಿದರು. ತೀವ್ರ ನಿಗಾ ಘಟಕಕ್ಕೆ ದಾಖಲಿಸಿ ತುತು ಚಿಕಿತ್ಸಾ ತಜ್ಞರು, ಮೂಳೆ ತಜ್ಷರು ಹಾಗೂ ಪ್ಲಾಸ್ಟಿಕ್‌ ಸರ್ಜರಿ ವೈದ್ಯರ ತಂಡ ಚಿಕಿತ್ಸೆ ಆರಂಭಿಸಿತು. ಮೊದಲಿಗೆ ಯುವಕನನ್ನು ಸ್ಥಿರ ಸ್ಥಿತಿಗೆ ಮರಳಿಸುವುದು ವೈದ್ಯರಿಗೆ ಬಹುದೊಡ್ಡ ಸವಾಲಾಗಿತ್ತು. ಜೊತೆಗೆ ವಿಷಕಾರಿ ಪದಾರ್ಥಗಳ ಹೊಗೆಯಿಂದ ಬಹುತೇಕ ನಿಷ್ಕ್ರಿಯಗೊಂಡಿದ್ದ ಶ್ವಾಸಕೋಶ ಸ್ಥಿತಿಯನ್ನು ನಿಯಂತ್ರಣಕ್ಕೆ ತರಬೇಕಾಗಿತ್ತು.






ತೀವ್ರವಾಗಿ ಘಾಸಿಗೊಂಡಿದ್ದ ಕೈಗಳು ಇನ್ನಷ್ಟು ಹಾನಿಗೊಳಗಾಗುವುದನ್ನು ತಪ್ಪಿಸಬೇಕಾಗಿದ್ದು ತುರ್ತು ಚಿಕಿತ್ಸಾ ತಜ್ಞರಾದ ಡಾ.ಹೇಮಂತ್‌ ಹೆಚ್‌.ಆರ್‌, ಡಾ.ಟಿ.ಎಸ್‌.ಶ್ರೀನಾಥ್‌ ಕುಮಾರ್‌, ಮೂಳೆ ತಜ್ಞ ಡಾ.ರವಿಕುಮಾರ್‌ ಮುಖರ್ತಿಯಲ್‌, ಪ್ಲಾಸ್ಟಿಕ್‌ ಸರ್ಜನ್‌ ಡಾ.ಕಾರ್ತಿಕ್‌ ಆದಿತ್ಯ ವಿ.ಎಸ್‌, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕಿಶನ್‌ ನಾಗ್‌ ತಂಡ ಯುವಕನನ್ನು ಪ್ರಜ್ಞಾವಸ್ಥೆಗೆ ಮರಳಿಸಿ ಪ್ರಾಣಾಪಾಯದಿಂದ ಪಾರು ಮಾಡುವಲ್ಲಿ ಯಶಸ್ವಿಯಾದರು.

error: Content is protected !!
Scroll to Top