ಬಂಗಾರದ ಬೆಲೆಯಲ್ಲಿ ಭಾರೀ ಏರಿಕೆ



(ನ್ಯೂಸ್ಕಡಬ) newskadaba.com,  .21 ದೀಪಾವಳಿ ಹಬ್ಬಕ್ಕೆಂದು ಚಿನ್ನ ಖರೀದಿಸಲು ಆಲೋಚಿಸಿದವರಿಗೆ ಇಂದು ಶಾಕ್‌ ಎದುರಾಗಿದೆ. ಕಳೆದೆರಡು ದಿನಗಳಿಂದ ಕೊಂಚ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಎಂದು ಮತ್ತೆ ಏರಿಕೆ ಕಂಡಿದೆ. ಇಂದು 22ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 190 ರೂ. ಏರಿಕೆ ಕಂಡು ಬಂದಿದ್ದು, 12,170 ರೂ. ಗೆ ತಲುಪಿದೆ. 24 ಕ್ಯಾರಟ್‌ 1 (Gold Price) ಗ್ರಾಂ ಚಿನ್ನದ ದರದಲ್ಲಿ 208 ರೂ. ಏರಿಕೆಯಾಗಿ, 13,277 ರೂ ಆಗಿದೆ. 22 ಕ್ಯಾರಟ್‌ನ 8 ಗ್ರಾಂ ಚಿನ್ನ 97,360 ಬಾಳಿದರೆ, 10 ಗ್ರಾಂಗೆ ನೀವು 1,21,700 ಹಾಗೂ 100 ಗ್ರಾಂಗೆ 12,17,000 ನೀಡಬೇಕಾಗುತ್ತದೆ. 24 ಕ್ಯಾರಟ್‌ನ 8 ಗ್ರಾಂ ಚಿನ್ನಕ್ಕೆ 1,06,216 ಆದರೆ, 10 ಗ್ರಾಂಗೆ ನೀವು 1,32,770 ಹಾಗೂ 100 ಗ್ರಾಂಗೆ 13,27,700 ಪಾವತಿಸಬೇಕಾಗುತ್ತದೆ.





ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ






ನಗರ 22 ಕ್ಯಾರಟ್‌ (1 ಗ್ರಾಂ) 24 ಕ್ಯಾರಟ್‌ (1 ಗ್ರಾಂ)
ಚೆನ್ನೈ 12,170 ರೂ 13,277 ರೂ
ಮುಂಬೈ 12,170 ರೂ 13,277 ರೂ
ದಿಲ್ಲಿ 12,170 ರೂ 13,277 ರೂ
ಕೋಲ್ಕತಾ 12,170 ರೂ 13,277 ರೂ
ಹೈದರಾಬಾದ್‌ 12,170 ರೂ 13,277 ರೂ

ಬೆಂಗಳೂರಿನಲ್ಲಿ ಬೆಳ್ಳಿ ದರದಲ್ಲಿ ಇಳಿಕೆ ಕಂಡು ಬಂದಿದೆ. 1 ಗ್ರಾಂಗೆ 178 ರೂ. ಇದ್ದರೆ, 8 ಗ್ರಾಂಗೆ 1,424 ಹಾಗೂ 10 ಗ್ರಾಂಗೆ 1,780 ರೂ. ಮತ್ತು 1 ಕೆಜಿಗೆ 1,78,000 ರೂ. ಇದೆ.

 

 

error: Content is protected !!
Scroll to Top