ಪುತ್ತೂರು: ಕಟ್ಟಡ ಕಾಮಗಾರಿ ವೇಳೆ ಮಣ್ಣು ಕುಸಿದು ಇಬ್ಬರು ಮೃತಪಟ್ಟ ಪ್ರಕರಣ ► ಕಟ್ಟಡ ಮಾಲಕ, ಇಂಜಿನಿಯರ್, ಗುತ್ತಿಗೆದಾರರ ವಿರುದ್ಧ ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಪುತ್ತೂರು, ಎ.27. ಮೂರು ದಿನಗಳ ಹಿಂದೆ ಪುತ್ತೂರಿನ ಅನಿತಾ ಆಯಿಲ್ ಮಿಲ್ ಸಮೀಪ ನೂತನ ಕಟ್ಟಡ ನಿರ್ಮಾಣದ ಸಂದರ್ಭದಲ್ಲಿ ಧರೆ‌ಕುಸಿದು ಉಂಟಾದ ದುರಂತದಲ್ಲಿ ಕಟ್ಟಡ ಮಾಲಕ, ಗುತ್ತಿಗೆದಾರ ಮತ್ತು ಇಂಜಿನಿಯರ್ ವಿರುದ್ಧ ಪ್ರಕರಣ ದಾಖಲಾಗಿದೆ.

ವರ್ಷದ ಹಿಂದೆ ಕಟ್ಟಡ ಕಾಮಗಾರಿಗಾಗಿ ಪರವಾನಿಗೆ ಪಡೆದುಕೊಳ್ಳಲಾಗಿತ್ತು. ಇದರ ಅವಧಿ 2018 ರ ಎಪ್ರಿಲ್‌ 14ಕ್ಕೆ ಕೊನೆಗೊಂಡಿದ್ದು, ಎಪ್ರಿಲ್ 17 ರಂದು ಪರವಾನಿಗೆ ನವೀಕರಣಕ್ಕೆ ಅರ್ಜಿ ನೀಡಿದ್ದು, ಇನ್ನೂ ಪರವಾನಿಗೆ ನೀಡಿರಲಿಲ್ಲ. ಅವಧಿ ಮೀರುವ ದಿನಾಂಕದ ಒಂದು ತಿಂಗಳು ಮೊದಲೇ ನವೀಕರಣಕ್ಕೆ ಅರ್ಜಿ ಸಲ್ಲಿಸಬೇಕು ಎಂಬ ನಿಯಮವಿರುವುದರಿಂದ ಇದನ್ನು ಅನಧಿಕೃತ ಕಟ್ಟಡ ನಿರ್ಮಾಣ ಎಂದು ಪುತ್ತೂರು ನಗರಸಭೆ ಪರಿಗಣಿಸಿ ಕಟ್ಟಡ ಮಾಲಕರಾದ ಅಜಿತ್ ನಾಯಕ್ ಹಾಗೂ ಪ್ರಕಾಶ್ ನಾಯಕ್ ವಿರುದ್ಧ ದೂರು ನೀಡಲಾಗಿದೆ. ಕಟ್ಟಡದ ಕಾಮಗಾರಿ ಸಂದರ್ಭದಲ್ಲಿ ಕಾರ್ಮಿಕರ ಸುರಕ್ಷತಾ ದೃಷ್ಟಿಯಿಂದ ಹೆಲ್ಮೆಟ್‌, ಶೂ ಮೊದಲಾದ ಪರಿಕರಗಳನ್ನು ನೀಡಬೇಕೆಂಬ ನಿಯಮವಿದ್ದು, ಆದರೆ ಇದಾವುದನ್ನೂ ಕಾಮಗಾರಿ ವೇಳೆ ಕಾರ್ಮಿಕರಿಗೆ ಪೂರೈಕೆ ಮಾಡದೆ ಇರುವುದರಿಂದ ಗುತ್ತಿದಾರ ಜಾನ್ಸನ್ ವಿರುದ್ಧ ದೂರು ನೀಡಲಾಗಿದೆ.

Also Read  ಇಂದು ವಿಶ್ವ ಜನಸಂಖ್ಯಾ ದಿನಾಚರಣೆ

ಆವರಣ ಗೋಡೆ ಎಬ್ಬಿಸಲೆಂದು ಮಣ್ಣಿನ ದಿಣ್ಣೆಯನ್ನು 30 ಅಡಿ ಆಳಕ್ಕೆ ಟೊಳ್ಳಾಗಿ ಕೊರೆದಿರುವುದು ದುರಂತಕ್ಕೆ ಪ್ರಮುಖ ಕಾರಣವಾಗಿದ್ದು, ತಳದಲ್ಲಿ ಟೊಳ್ಳಾಗಿ ಕೊರೆದರೆ, ಮೇಲ್ಭಾಗದ ಮಣ್ಣು ಕುಸಿದು ಬೀಳುವುದು ಸಹಜವಾಗಿದೆ. ಹೀಗಾಗಿ, ಕಾಮಗಾರಿ ನಿರ್ವಹಣೆಯೂ ಅವೈಜ್ಞಾನಿಕವಾಗಿದೆ ಎಂದು ಇಂಜಿನಿಯರ್ ಸಚಿತಾನಂದ ವಿರುದ್ಧ ಮೃತ ಕಾರ್ಮಿಕನ ಪತ್ನಿಯೋರ್ವರು ನೀಡಿದ ದೂರಿನಂತೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಆರೆಸ್ಸೆಸ್ ಕಾರ್ಯಕರ್ತ ಶರತ್ ಹತ್ಯೆ ಆರೋಪಿಗಳ ಬಂಧನ ► ಕೊನೆಗೂ ಪ್ರಕರಣ ಬೇಧಿಸಿದ ಜಿಲ್ಲಾ ಪೊಲೀಸರು

error: Content is protected !!
Scroll to Top