ಮರಣದ ವೇಳೆಯಲ್ಲೂ ಕರ್ತವ್ಯ ಪ್ರಜ್ಞೆ ಮೆರೆದ ಐರಾವತ ಚಾಲಕ ► 40 ಪ್ರಯಾಣಿಕರ ಪ್ರಾಣವುಳಿಸಿದ ಚಾಲಕನಿಗೊಂದು ಹ್ಯಾಟ್ಸಪ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಎ.27. ಐರಾವತ ಚಾಲಕನೋರ್ವ ತಾನು ಹೃದಯಾಘಾತಕ್ಕೊಳಗಾಗಿ ಪ್ರಾಣ ಬಿಡುವ ಸಂದರ್ಭದಲ್ಲೂ ಕರ್ತವ್ಯ ಪ್ರಜ್ಞೆ ಮೆರೆದು 40 ಪ್ರಯಾಣಿಕರ ಪ್ರಾಣವುಳಿಸಿದ ಘಟನೆ ಕೋಲಾರದಲ್ಲಿ ನಡೆದಿದೆ.

ಬೆಂಗಳೂರಿನಿಂದ ಚೆನ್ನೈಗೆ ಹೊರಟಿದ್ದ ಐರಾವತ ಕ್ಲಬ್ ಕ್ಲಾಸ್ ಬಸ್‌ ಚಾಲಕ ಜಯಶೀಲನ್‌ ರವರಿಗೆ ಕೋಲಾರದ ನರಸಾಪುರದ ಬಳಿ ಹೃದಯಾಘಾತವುಂಟಾಗಿದ್ದು, ತಕ್ಷಣವೇ ಬಸ್ಸನ್ನು ನಿಲ್ಲಿಸಿದ ಜಯಶೀಲನ್‌ ಪ್ರಾಣ ಬಿಟ್ಟಿದ್ದಾರೆ. ಮರಣದ ವೇಳೆಯಲ್ಲೂ ಬಸ್ ಚಾಲಕನ ಕರ್ತವ್ಯ ಪ್ರಜ್ಞೆಯಿಂದಾಗಿ ಬಸ್ ನಲ್ಲಿದ್ದ 40 ಪ್ರಯಾಣಿಕರ ಜೀವ ಉಳಿದಿದ್ದು,, ಕರ್ತವ್ಯ ನಿಷ್ಠೆ ಮೆರೆದ ಚಾಲಕನ ಈ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Also Read  ಕಡಬ: ಬ್ಲಾಕ್ ಕಾಂಗ್ರೆಸ್ ಉಸ್ತುವಾರಿಯಾಗಿ ನಂದಕುಮಾರ್ ಮಡಿಕೇರಿ ನೇಮಕ

error: Content is protected !!
Scroll to Top