(ನ್ಯೂಸ್ ಕಡಬ) newskadaba.com ಅ. 16. ಅಪ್ರಾಪ್ತ ಬಾಲಕನಿಗೆ ಬೈಕ್ ನೀಡಿ ಅಪಘಾತವಾದ ಪ್ರಕರಣಕ್ಕೆ ಸಂಬಂಧಿಸಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಕಲಂ u/s 281,125(a) BNS and u/s 4(1),181,146,196,199A(1),190(2) IMV act and u/s 115CMV Rule ಪ್ರಕರಣ ದಾಖಲಾಗಿತ್ತು.
ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಅಪ್ರಾಪ್ತ ಬಾಲಕ ಚಲಾಯಿಸಿದ KA19 S9666 ವಾಹನದ ಮಾಲೀಕ ಮಹಮ್ಮದ್ ಅನೀಸ್ ಇವರಿಗೆ ಬಂಟ್ವಾಳ ಎಸಿಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ ಸೆ.26 ರಂದು 32,000 ರೂಪಾಯಿ ದಂಡ ವಿಧಿಸಿ ಆದೇಶ ಮಾಡಿದೆ.








