ಪುತ್ತೂರು ಕಟ್ಟಡ ದುರಂತದಲ್ಲಿ ಮೃತದೇಹದ ಮುಂದೆ ತೆಗೆದ ಸೆಲ್ಫಿ ಇದೀಗ ವೈರಲ್ ► ಯುವಕನ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ

(ನ್ಯೂಸ್ ಕಡಬ) newskadaba.com ಪುತ್ತೂರು, ಎ.25. ಮಂಗಳವಾರದಂದು ಪುತ್ತೂರಿನಲ್ಲಿ ಕಟ್ಟಡ ನಿರ್ಮಾಣ ವೇಳೆ ನಡೆದ ದುರಂತದ ಸಂದರ್ಭದಲ್ಲಿ ಯುವಕನೋರ್ವ ಮೃತದೇಹದ ಮುಂದೆ ನಿಂತು ಸೆಲ್ಫಿ ತೆಗೆದಿರುವುದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ‌.

ಎಲ್ಲರೂ ರಕ್ಷಣಾ ಕಾರ್ಯಚರಣೆಯಲ್ಲಿ ನಿರತರಾಗಿದ್ದಾಗ ಕಾರ್ಯಚರಣೆಗೆ ಬಂದ ವ್ಯಕ್ತಿಯೋರ್ವ ಮೃತದೇಹದ ಮುಂಭಾಗದಲ್ಲಿ ಸೆಲ್ಫಿ ತೆಗೆಯುತ್ತಿರುವ ದೃಶ್ಯವನ್ನು ಯಾರೋ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದು, ಯುವಕನ ಕೃತ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ದುರಂತದ ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆ ಮಾಡುವುದನ್ನು ಬಿಟ್ಟು ಸೆಲ್ಫಿ ತೆಗೆದುಕೊಂಡು ಹರ್ಷ ವ್ಯಕ್ತಪಡಿಸುವ ಯುವಕನ ನಡತೆಯನ್ನು ಹಲವರು ಪ್ರಶ್ನಿಸಿದ್ದಾರೆ.

Also Read  ದೀಪಕ್ ಹತ್ಯೆಗೆ ಪ್ರತೀಕಾರವಾಗಿ ಬಶೀರ್ ಹತ್ಯೆಯನ್ನು ಸಮರ್ಥಿಸಿದ ಆರೋಪ ► ವಿಹಿಂಪ ಜಿಲ್ಲಾಧ್ಯಕ್ಷ ಜಗದೀಶ್ ಶೇಣವ ವಿರುದ್ಧ ಪ್ರಕರಣ ದಾಖಲು

error: Content is protected !!
Scroll to Top