(ನ್ಯೂಸ್ ಕಡಬ) newskadaba.com ಅ. 13. ಸಹಾರ ಫ್ರೆಂಡ್ಸ್ ಕ್ಲಬ್ ಸುಂಕದಕಟ್ಟೆ ಇದರ ಮಹಾಸಭೆಯು ಹಮೀದ್ ಇವರ ಗೌರವ ಅಧ್ಯಕ್ಷತೆಯಲ್ಲಿ ನಡೆಯಿತು. ಜೊತೆಗೆ ಸಹಾರ ಫ್ರೆಂಡ್ಸ್ ಕ್ಲಬ್ ಇದರ 2025-26ನೇ ಸಾಲಿಗೆ ನೂತನ ಸಾರಥಿಗಳ ಆಯ್ಕೆಯೂ ನಡೆಯಿತು.
ಕ್ಲಬ್ ನ ನೂತನ ಅಧ್ಯಕ್ಷರಾಗಿ ಹಬೀಬ್, ಕಾರ್ಯದರ್ಶಿಯಾಗಿ ಸುಹೈಲ್ ಹಾಗೂ ಕೋಶಾಧಿಕಾರಿಯಾಗಿ ಸಿಯಾಬ್ ಸುಂಕದಕಟ್ಟೆ ಆಯ್ಕೆಯಾದರು. ಉಪಾಧ್ಯಕ್ಷರಾಗಿ ನೌಫಲ್, ಜೊತೆ ಕಾರ್ಯದರ್ಶಿಯಾಗಿ ಸಿನಾನ್, ತಂಡದ ನಾಯಕ ಷರೀಫ್, ಉಪನಾಯಕ ಜಬ್ಬಾರ್, ಕಾರ್ಯಕಾರಿ ಸದಸ್ಯರಾಗಿ ರವೂಫ್, ಸಾಬಿಕ್, ಸವಾದ್, ಮನ್ಸೂರ್, ನಾಸಿರ್, ಶಾಕಿರ್, ಸಲಾಂ, ನಝೀರ್ ಮಸ್ಕತ್, ಅಶ್ರಫ್ ಎಸ್ ಎ, ಸವಾದ್ ಚೋಟು ಹಾಗೂ ಅಸದ್ ದುಬೈ ಅವರನ್ನು ಆಯ್ಕೆ ಮಾಡಲಾಯಿತು.








