ಪಣಂಬೂರಿನಲ್ಲಿ ವ್ಯಕ್ತಿಯೊಬ್ಬರು ಮೀನು ಹಿಡಿಯಲು ಹೋಗಿ ನೀರು ಪಾಲು



(ನ್ಯೂಸ್ಕಡಬ) newskadaba.com,  .09 ಮಂಗಳೂರು: ತೋಟ ಬೆಂಗ್ರೆ ಅಳಿವೆ ಬಾಗಿಲು ಬಳಿ ನದಿಯಲ್ಲಿ ಬಲೆ ಹಾಕಿ ಮೀನು ಹಿಡಿಯಲು, ಮೀನುಗಾರಿಕೆಗೆ ಹೋದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ‌ ಘಟನೆ ನಡೆದಿದೆ.





ಮನೋಹರ್ ಪುತ್ರನ್ (53) ಮೃತ ವ್ಯಕ್ತಿ.ಬುಧವಾರ ಸಂಜೆ 6:30ಕ್ಕೆ‌ ಈ ಘಟನೆ ನಡೆದಿದೆ..






ಇವರು ಬಲೆ ಹಾಕಿ ಮೀನು ಹಿಡಿಯಲು ಹೋದಾಗ ನೀರಿಗೆ ಬಿದ್ದು ಮೃತ ಪಟ್ಟಿರುತ್ತಾರೆ. ಬಳಿಕ ಸ್ಥಳಿಯರು ಹಾಗೂ ಪಣಂಬೂರು ಠಾಣಾ ಪೋಲಿಸ್ ಅಧಿಕಾರಿಗಳ ಸಹಾಯದಿಂದ ಹುಡುಕಾಟ ನಡೆಸಲಾಯಿತು. ಸುಮಾರು ರಾತ್ರಿ 9:30 ಸಮಯ ಮೃತದೇಹ ಪತ್ತೆಯಾಗಿದೆ.ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!
Scroll to Top