ಚನ್ನಪಟ್ಟಣ : ವಿದ್ಯುತ್ ಶಾಕ್ ಗೆ ಆನೆ ಬಲಿ



(ನ್ಯೂಸ್ಕಡಬ) newskadaba.com,  ಅ.04 ರಾಮನಗರ: ವಿದ್ಯುತ್ ಸ್ಪರ್ಶದಿಂದ ಕಾಡಾನೆ‌ ಸಾವನ್ನಪ್ಪಿರುವ ಘಟನೆ ಚನ್ನಪಟ್ಟಣ ತಾಲೂಕಿನ ಚಿಕ್ಕವಿಠಲೇನಹಳ್ಳಿ ಗ್ರಾಮದಲ್ಲಿ ನಡೆದಿದೆ.ಶುಕ್ರವಾರ(ಅ.04) ರಾತ್ರಿ ಜಮೀನೊಂದರಲ್ಲಿ ತೆಂಗಿನಮರದ ಸುಳಿಯನ್ನು ಕಿತ್ತು ತಿನ್ನಲು‌ ಯತ್ನಿಸಿದಾಗ ತೆಂಗಿನ‌ ಮರ‌ದ‌ ಗರಿ 11ಕೆವಿ ವಿದ್ಯುತ್ ತಂತಿಗೆ ತಗುಲಿದ್ದರಿಂದ‌ ಸ್ಥಳದಲ್ಲೇ ಕಾಡಾನೆ‌ ಸಾವಿಗೀಡಾಗಿದೆ.





ಸುಮಾರು 40 ವರ್ಷದ ಹೆಣ್ಣು ಆನೆಯಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಮಕೃಷ್ಣಪ್ಪ ಸಾಗರ್ ತಿಳಿಸಿದ್ದಾರೆ.ಘಟನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿನೀಡಿ ಪರಿಶೀಲನೆ ಪಶು ವೈದ್ಯರನ್ನು ಸ್ಥಳಕ್ಕೆ ಕರೆಸಿ‌ ಮೃತ ಆನೆಯ ಮರಣೋತ್ತರ ‌ಪರೀಕ್ಷೆ ನಡೆಸಲಾಯಿತು. ಚಾಮರಾಜನಗರ ಜಿಲ್ಲೆಯ ಮಲೆ ಮಾದೇಶ್ವರ ಬೆಟ್ಟದಲ್ಲಿ ಹುಲಿ ಮೃತಪಟ್ಟ ಒಂದು ದಿನದ ನಂತರ ಈ ಘಟನೆ ಸಂಭವಿಸಿದೆ.






 

error: Content is protected !!
Scroll to Top