ಹಿರಿಯೂರು ಬಳಿ ಭೀಕರ ಅಪಘಾತ; ಮಗು ಸೇರಿ ಮೂವರು ಸಾವು



(ನ್ಯೂಸ್ಕಡಬ) newskadaba.com,  ಅ.04 ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಮೇಟಿಕುರ್ಕೆ ಬಳಿ ಶುಕ್ರವಾರ(ಅ.03) ಕಾರು ಪಲ್ಟಿಯಾಗಿದ್ದು, ಭೀಕರ ಅಪಘಾತದಲ್ಲಿ ಮಗು ಸೇರಿ ಮೂವರು ಮೃತಪಟ್ಟಿದ್ದಾರೆ.





ಯಾದಗಿರಿ ಮೂಲದ ಮಲ್ಲಮ್ಮ(26), ಸರೋಜಮ್ಮ(25) ಮತ್ತು ಪುಟ್ಟ ಮಗು ಮೃತ ದುರ್ದೈವಿಗಳು.






ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ಈ ದುರಂತ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ

ಸ್ಥಳಕ್ಕೆ ಡಿವೈಎಸ್​​ಪಿ ಶಿವಕುಮಾರ್ ಮತ್ತು ಸಿಪಿಐ ಗುಡ್ಡಪ್ಪ ಅವರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಹಿರಿಯೂರು ಗ್ರಾಮಾಂತರ ಠಾಣಾಯಲ್ಲಿ ಪ್ರಕರಣ ದಾಖಲಾಗಿದೆ.

 

error: Content is protected !!
Scroll to Top