(ನ್ಯೂಸ್ ಕಡಬ) newskadaba.com, ಅ.03 ಪುತ್ತೂರು: ದಕ್ಷಿಣ ರೈಲ್ವೆ ವಲಯವು ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಬೆಂಗಳೂರು ಮಾರ್ಗವಾಗಿ ದೆಹಲಿಗೆ ವಿಶೇಷ ರೈಲು ಘೋಷಣೆ ಮಾಡಿದೆ. ಅ.5ರಂದು ಈ ರೈಲು ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಹೊರಡಲಿದೆ.
ರೈಲು ಸಂಖ್ಯೆ 06008 ಮಂಗಳೂರು ಸೆಂಟ್ರಲ್- ಹಜ್ರತ್ ನಿಜಾಮುದ್ದೀನ್ ವಿಶೇಷ ರೈಲು ಅಕ್ಟೋಬರ್ 5ರಂದು ಮಧ್ಯಾ2.25ಕ್ಕೆ ಮಂಗಳೂರು ಸೆಂಟ್ರಲಿನಿಂದ ಹೊರಟು ಪುತ್ತೂರು, ಸುಬ್ರಹ್ಮಣ್ಯ ರೋಡ್, ಹಾಸನ ಮಾರ್ಗವಾಗಿ ರಾತ್ರಿ 11.30ಕ್ಕೆ ಯಶವಂತಪುರ ಜಂಕ್ಷನ್ ನಿಲ್ದಾಣ ತಲುಪಲಿದೆ. ಅಲ್ಲಿಂದ ರಾತ್ರಿ 11.45 ಕ್ಕೆ ಹೊರಡುವ ರೈಲು ಯಲಹಂಕ, ಹಿಂದುಪುರ, ಧರ್ಮಾವರಂ ಮಾರ್ಗವಾಗಿ ಅ.6 ರಂದು ಬೆಳಗ್ಗೆ 10.30ಕ್ಕೆ ಹೈದರಾಬಾದ್ ಕಾಚೆಗುಡ ನಿಲ್ದಾಣ ತಲುಪಲಿದೆ. ಅಲ್ಲಿಂದ ಬೆಳಗ್ಗೆ 10.40ಕ್ಕೆ ಹೊರಡುವ ರೈಲು ಕಾಜಿಪೇಟೆ, ಬಲ್ಹಾರ್ಶಾ, ಜಾನ್ಸಿ ಮಾರ್ಗವಾಗಿ ಅ.7 ರಂದು ರಾತ್ರಿ 8 ಗಂಟೆಗೆ ಹಜ್ರತ್ ನಿಜಾಮುದ್ದೀನ್ ರೈಲು ನಿಲ್ದಾಣ ತಲುಪಲಿದೆ.
ವಿಶೇಷ ರೈಲು ನಿಲುಗಡೆ
ರೈಲಿಗೆ ಮಂಗಳೂರು ಸೆಂಟ್ರಲ್ ಬಳಿಕ ಬಂಟ್ವಾಳ, ಕಬಕ ಪುತ್ತೂರು, ಸುಬ್ರಹ್ಮಣ್ಯ ರೋಡ್, ಸಕಲೇಶಪುರ, ಹಾಸನ ಜಂಕ್ಷನ್, ಚನ್ನರಾಯಪಟ್ಟಣ, ಕುಣಿಗಲ್, ಯಶವಂತಪುರ ಜಂಕ್ಷನ್, ಯಲಹಂಕ ಜಂಕ್ಷನ್, ಹಿಂದುಪುರ, ಧರ್ಮಾವರಂ ಜಂಕ್ಷನ್, ಅನಂತಪುರ, ಗೂಟಿ ಜಂಕ್ಷನ್, ಕರ್ನೂಲ್ ಸಿಟಿ, ಮಹಬೂಬನಗರ್, ಕಾಚೆಗುಡ, ಕಾಜಿಪೇಟೆ ಜಂಕ್ಷನ್, ಬಲ್ಹಾರ್ಶಾ, ನಾಗಪುರ ಜಂಕ್ಷನ್, ಜುಹಾರ್ಪುರ, ಇಟಾರ್ಸಿ ಜಂಕ್ಷನ್, ಭೋಪಾಲ್ ಜಂಕ್ಷನ್, ಬಿನಾ ಜಂಕ್ಷನ್, ಜಾನ್ಸಿ ಜಂಕ್ಷನ್, ಗ್ವಾಲಿಯರ್ ಜಂಕ್ಷನ್, ಆಗ್ರಾ ಕಂಟೋನ್ಮೆಂಟ್, ಮಥುರಾ ಜಂಕ್ಷನ್, ಹಜ್ರತ್ ನಿಜಾಮುದ್ದೀನ್ ರೈಲು ನಿಲ್ದಾಣಗಳಲ್ಲಿ ನಿಲುಗಡೆ ಇರಲಿದೆ.








