2025ರ ಏಷ್ಯಾ ಕಪ್‌: ಸಿಕ್ಸ್, ಬೌಂಡರಿ ಸಿಡಿಸಿ ಐಸಿಸಿ ರ್ಯಾಂ ಕಿಂಗ್‌ನಲ್ಲಿ ವಿಶ್ವದಾಖಲೆ ಸೃಷ್ಟಿಸಿದ ಅಭಿಷೇಕ್ ಶರ್ಮಾ



(ನ್ಯೂಸ್ಕಡಬ) newskadaba.com,  ಅ.02 ದುಬೈ: 2025ರ ಏಷ್ಯಾ ಕಪ್‌ನಲ್ಲಿ ಸಿಕ್ಸ್, ಬೌಂಡರಿ ಸಿಡಿಸಿ ರನ್‌ಗಳ ಮಳೆ ಹರಿಸಿದ ಅಭಿಷೇಕ್ ಶರ್ಮಾ ಐಸಿಸಿ ಟಿ20 ರ‍್ಯಾಂಕ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದು ವಿಶ್ವದಾಖಲೆ ನಿರ್ಮಿಸಿದ್ದಾರೆ





ಅಭಿಷೇಕ್ ಶರ್ಮಾ ಮೊದಲ ಸ್ಥಾನ ಗಳಿಸಿದ್ದು ಅಲ್ಲದೇ 926 ರೇಟಿಂಗ್ ಪಾಯಿಂಟ್ ಪಡೆದಿದ್ದಾರೆ. ಈ ಮೂಲಕ ಐಸಿಸಿ ಟಿ20 ರ‍್ಯಾಂಕ್ ಪಟ್ಟಿಯಲ್ಲಿ ಕೊಹ್ಲಿ ಹೆಸರಿನಲ್ಲಿದ್ದ ದಾಖಲೆಯನ್ನು ಅಭಿಷೇಕ್ ಶರ್ಮಾ ಮುರಿದಿದ್ದಾರೆ.






ಸೂಪರ್ 4 ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಶರ್ಮಾ 31 ಎಸೆತಗಳಲ್ಲಿ 61 ರನ್ (8 ಬೌಂಡರಿ, 2 ಸಿಕ್ಸ್) ಸಿಡಿಸಿದ್ದರು. ಈ ಸ್ಫೋಟಕ ಆಟದಿಂದಾಗಿ ಅಭಿಷೇಕ್ ಶರ್ಮಾ ಅವರ ರೇಟಿಂಗ್ ಪಾಯಿಂಟ್ ಮೇಲಕ್ಕೆ ಹೋಗಿದ್ದು, ಮೊದಲ ಸ್ಥಾನ ಗಳಿಸಿದ್ದಾರೆ.ಅಂಕಪಟ್ಟಿಯಲ್ಲಿ ಫಿಲ್ ಸಾಲ್ಟ್ 2ನೇ ರ‍್ಯಾಂಕ್ ಪಡೆದರೆ ತಿಲಕ್ ವರ್ಮಾ ಮೂರನೇ ಸ್ಥಾನ ಪಡೆದಿದ್ದಾರೆ. 2 ಸ್ಥಾನ ಕುಸಿದಿದ್ದರಿಂದ ಸೂರ್ಯಕುಮಾರ್ ಯಾದವ್ ಅವರು 8ನೇ ಸ್ಥಾನಕ್ಕೆ ಇಳಿದಿದ್ದಾರೆ.

 

 

error: Content is protected !!
Scroll to Top