3 ದಿನ ರಾಜ್ಯಕ್ಕೆ ಭಾರಿ ಮಳೆ



(ನ್ಯೂಸ್ಕಡಬ) newskadaba.com,  ಅ.02 ಬೆಂಗಳೂರು: ಬಂಗಾಳ ಕೊಲ್ಲಿ ಉಪಸಾಗರದಲ್ಲಿ ವಾಯುಭಾರ ಕುಸಿತದ ಹಿನ್ನೆಲೆ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಉತ್ತರ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಅಕ್ಟೋಬರ್ 2 ರಿಂದ ಅಕ್ಟೋಬರ್ 5 ರವರೆಗೆ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.





ಕಳೆದ 24 ಗಂಟೆಯಲ್ಲಿ ಭಾರಿ ಮಳೆಯಾದ ಪ್ರದೇಶಗಳು






ಬೆಳಗಾವಿ ಜಿಲ್ಲೆಯ ನೀಲವಾಡೆಯಲ್ಲಿ 51.0 ಮಿಮೀ ಮಳೆ ದಾಖಲಾಗಿದೆ.

* ಉಡುಪಿ ಜಿಲ್ಲೆಯ ಹಕ್ಲಾಡಿಯಲ್ಲಿ 44.5 ಮಿಮೀ ಮಳೆ ದಾಖಲಾಗಿದೆ.
* ದಕ್ಷಿಣ ಕನ್ನಡ ಜಿಲ್ಲೆಯ ಚೆನ್ನೈತ್ತೋಡಿಯಲ್ಲಿ 41.5 ಮಿಮೀ ಮಳೆ ದಾಖಲಾಗಿದೆ.
* ಹಾಸನ ಜಿಲ್ಲೆಯ ಹೊಗಡಹಳ್ಳದಲ್ಲಿ 40.0 ಮಿಮೀ ಮಳೆ ದಾಖಲಾಗಿದೆ.
* ದಕ್ಷಿಣ ಕನ್ನಡ ಜಿಲ್ಲೆಯ ರಾಯೀಯಲ್ಲಿ 37.5 ಮಿಮೀ ಮಳೆ ದಾಖಲಾಗಿದೆ.
ತೀವ್ರಗೊಳ್ಳುವ ಸಾಧ್ಯತೆಯಿದೆ. ನಂತರ ಇದು ಪಶ್ಚಿಮ-ನೈಋತ್ಯ ದಿಕ್ಕಿಗೆ ವಾಯುವ್ಯ ಅರಬ್ಬೀ ಸಮುದ್ರದ ಕಡೆಗೆ ಚಲಿಸಲಿದೆ.

ನಾಳೆಯ ಹವಾಮಾನ

ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಹಲವು ಕಡೆಗಳಲ್ಲಿ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಭಾರಿ ಗಾಳಿ-ಗುಡುಗು ಸಹಿತ ಸಾಧಾರಣ ಮಳೆ ಹಾಗೂ ಬಳ್ಳಾರಿ, ಬೆಂಗಳೂರು (ಗ್ರಾಮಾಂತರ), ಬೆಂಗಳೂರು (ನಗರ), ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಮತ್ತು ವಿಜಯನಗರದಲ್ಲಿ ಗುಡುಗು ಸಹಿತ ಮಳೆಯಾಗಲಿದೆ.

error: Content is protected !!
Scroll to Top