ಬೇಸಿಗೆಯಲ್ಲಿ ಸವಿಯಿರಿ ಕೂಲ್ ಆಗಿರುವ ವೆನಿಲ್ಲಾ ಕಸ್ಟರ್ಡ್

ಬೇಕಾಗುವ ಸಾಮಾಗ್ರಿಗಳು :

  • ಹಾಲು(1 ಕಪ್)
  • whipped ಕ್ರೀಮ್(1 ಕಪ್)
  • ಸಕ್ಕರೆ(2-3 ಕಪ್)
  • ಬ್ರೆಡ್(5-6 ಪೀಸ್, ಹೊರಗಿನ ಭಾಗವನ್ನು ತೆಗೆದು)
  • ಮೊಟ್ಟೆ( 2)
  • ವೆನಿಲ್ಲಾ ಎಸೆನ್ಸ್ (1 ಚಮಚ)
  • ಕಸ್ಟರ್ಡ್ ಪುಡಿ(4 ಚಮಚ, ಕಸ್ಟರ್ಡ್ ಪುಡಿ ವೆನಿಲ್ಲಾ ಫ್ಲೇವರ್ ನಲ್ಲಿ ಇದ್ದರೆ ಎಸೆನ್ಸ್ ಅಗತ್ಯವಿಲ್ಲ)

ಮಾಡುವ ವಿಧಾನ:
ಒಂದು ಪಾತ್ರೆಗೆ ಹಾಲು ಮತ್ತು ಸಕ್ಕರೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ, ನಂತರ ಇದಕ್ಕೆ ಬ್ರೆಡ್ ನ ಬಿಳಿ ಭಾಗವನ್ನು ಹಾಕಿ ಮಿಕ್ಸ್ ಮಾಡಿ. ನಂತರ ಮೊಟ್ಟೆಯನ್ನು ಹಾಕಿ ಚೆನ್ನಾಗಿ ಕದಡಿಕೊಳ್ಳಿ.
ಇದನ್ನು ಒಲೆಯ ಮೇಲೆ ಇಟ್ಟು ಸೌಟಿನಿಂದ ತಿರುಗಿಸುತ್ತಾ, ಮೊಟ್ಟೆಯ ಹಸಿ ವಾಸನೆ ಹೋಗುವ ತನಕ ಬಿಸಿ ಮಾಡಿಕೊಳ್ಳಿ. ಇದಕ್ಕೆ ಕಸ್ಟರ್ಡ್ ಪುಡಿ ಹಾಕಿ 2 ನಿಮಿಷ ಬಿಸಿ ಮಾಡಿಕೊಳ್ಳಿ. ನಂತರ ವೆನಿಲ್ಲಾ ಎಸೆನ್ಸ್ ಸೇರಿಸಿ. ಇದನ್ನು ಇನ್ನೊಂದು ಪಾತ್ರೆಗೆ ಹಾಕಿ ತಣ್ಣಗಾಗಲು ಇಡಿ, ನಂತರ ಸುಮಾರು 12 ತಾಸು ಫ್ರಿಜ್ ನಲ್ಲಿಡಿ. ಈಗ ವೆನಿಲ್ಲಾ ಕಸ್ಟರ್ಡ್ ಸರ್ವ್ ಮಾಡಲು ರೆಡಿ.

error: Content is protected !!
Scroll to Top