(ನ್ಯೂಸ್ ಕಡಬ) newskadaba.com, ಅ. 01 ಬಳ್ಳಾರಿ: ಬೆಂಗಳೂರು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ದಿಂದ ರಾಜ್ಯದ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ಅ.೧ರಿಂದ ಅ.೯ರವರೆಗೆ ಎಂಟು ದಿನಗಳ ಕಾಲ ನಾನು ವಿಜ್ಞಾನಿ ೨೦೨೫ ಶೀರ್ಷಿಕೆ ಅಡಿಯಲ್ಲಿ ಶಾಲೆಗೊಂದು ಟೆಲಿಸ್ಕೋ ತಯಾರಿಸುವ ತರಬೇತಿಯನ್ನು ನುರಿತ ತಜ್ಞರಿಂದ ನೀಡಲಾಗುವುದು.
ಈ ತರಬೇತಿಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಹತ್ತಿರ ಇರುವ ಬ್ಯಾ ಸೆಂಟ್ ಉದ್ಯಾನವನದ ಸ್ಕೌಟ್ ಕ್ಯಾಂಪ್ ನಲ್ಲಿ ನೀಡಲಾಗುತ್ತಿದೆ ಬಳ್ಳಾರಿ ಜಿಲ್ಲೆಯಿಂದ ಎಂಟು ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ.
ಜಿಲ್ಲೆಯ ಪ್ರತಿಯೊಂದು ಶಾಲೆಗಳಿಗೂ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ನ ಅಧ್ಯಕ್ಷ ಆರ್ಎಚ್ಎಮ್ ಚನ್ನಬಸವ ಸ್ವಾಮಿ ಹಾಗೂ ಪ್ರಧಾನ ಕಾರ್ಯದರ್ಶಿ ಯು ರಮೇಶ್ ಇತರೆ ಪದಾಧಿಕಾರಿಗಳೊಂದಿಗೆ ತೆರಳಿ ವೈಜ್ಞಾನಿಕ ಚಿಂತನೆ ಮಕ್ಕಳಿಗೆ ಭೌತಿಕ ಪ್ರಜ್ಞೆ ಆಕಾಶಕಾಯಗಳ ಪರಿಚಯ ಗ್ರಹಣ ಮುಂತಾದ ಹಲವಾರು ವಿಷಯಗಳ ಮಂಡನೆ ನಾನು ವಿಜ್ಞಾನಿ ಯಾ ಕಾಗಬೇಕು ಸಂಶೋಧನಾ ಸ್ವರೂಪದ ಬಗ್ಗೆ ತಿಳಿಹೇಳಿ ಮಕ್ಕಳ ಮನವೊಲಿಸಿದ್ದಾರೆ. ಈ ತರಬೇತಿಯು ಇಂದು ಅಕ್ಟೋಬರ್ ಒಂದರಿಂದ ನಡೆಯಲಿದೆ








