ಗಾರ್ಬಾ ನೃತ್ಯ ಮಾಡುತ್ತಿದ್ದಾಗಲೇ ಮಹಿಳೆಯೊಬ್ಬಳು ಹೃದಯಾಘಾತದಿಂದ ಸಾವು



(ನ್ಯೂಸ್ಕಡಬ) newskadaba.com,  ಅ.01 ಇಂದೋರ್: ದುರ್ಗಾ ದೇವಸ್ಥಾನದಲ್ಲಿ ಗಾರ್ಬಾ ನೃತ್ಯ ಮಾಡುತ್ತಿದ್ದಾಗಲೇ ಮಹಿಳೆಯೊಬ್ಬಳು ಹೃದಯಾಘಾತದಿಂದ ಕುಸಿದುಬಿದ್ದು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ಖಾರ್ಗೋನ್‌ನಲ್ಲಿ ನಡೆದಿದೆ. ಇದರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು ಮಹಿಳೆಯು ತಮ್ಮ ಪತಿಯೊಂದಿಗೆ ದೇವಸ್ಥಾನದಲ್ಲಿ ನೃತ್ಯ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ನೆಲದ ಮೇಲೆ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಕೆಲವೇ ಸೆಕೆಂಡುಗಳಲ್ಲಿ ಆಕೆ ಮೃತಪಟ್ಟಿದ್ದಾಳೆ.





ಈ ದಂಪತಿಗಳು ಮೇ ತಿಂಗಳಲ್ಲಿ ಅಂದರೆ ಕೇವಲ ನಾಲ್ಕು ತಿಂಗಳ ಹಿಂದೆ ವಿವಾಹವಾಗಿದ್ದರು. ಇಬ್ಬರು ಒಟ್ಟಿಗೆ ಹಬ್ಬವನ್ನು ಆಚರಿಸುತ್ತಾ, ನೃತ್ಯ ಪ್ರದರ್ಶನ ನೀಡುತ್ತಿದ್ದಾಗ ಈ ದುರಂತ ಸಂಭವಿಸಿದೆ.






ಓ ಮೇರೆ ಧೋಲ್ನಾ ಹಾಡಿಗೆ ದಂಪತಿ ನೃತ್ಯ ಮಾಡುತ್ತಿದ್ದಾಗ ಸೋನಮ್ ಇದ್ದಕ್ಕಿದ್ದಂತೆ ನೆಲದ ಮೇಲೆ ಕುಸಿದುಬಿದ್ದಿದ್ದಾಳೆ. ದಂಪತಿಯ ನೃತ್ಯ ಪ್ರದರ್ಶನ ವೀಕ್ಷಿಸುತ್ತಿದ್ದ ಪ್ರೇಕ್ಷಕರು ಆರಂಭದಲ್ಲಿ ಆಕೆ ಬೀಳುತ್ತಿದ್ದಂತೆ ನೃತ್ಯ ಪ್ರದರ್ಶನದ ಭಾಗವಿರಬಹುದೆಂದು ಭಾವಿಸಿ ನಕ್ಕಿದ್ದರು. ಆದರೆ, ಆಕೆಯಲ್ಲಿ ಯಾವುದೇ ಚಲನೆಯಿಲ್ಲದ್ದನ್ನು ಕಂಡು ಜನರು ಆತಂಕಗೊಂಡರು. ಕೂಡಲೇ ಆಕೆಯ ಪತಿ ಕೃಷ್ಣಪಾಲ್ ಪತ್ನಿಯನ್ನು ಮೇಲಕ್ಕೆತ್ತಲು ಧಾವಿಸಿದರು. ಆತನಿಗೆ ಸಾಧ್ಯವಾಗದಿದ್ದಾಗ, ಇತರರು ಸಹಾಯ ಮಾಡಲು ಮುಂದೆ ಬಂದರು.

error: Content is protected !!
Scroll to Top