(ನ್ಯೂಸ್ ಕಡಬ) newskadaba.com, ಅ.01 ಹೊಸದಿಲ್ಲಿ : ಜಾಗತಿಕ ಆರ್ಥಿಕ ಅನಿಶ್ಚಿತತೆಯಿಂದ ಷೇರುಪೇಟೆ ಮೇಲಕ್ಕೆ ಏಳುತ್ತಿಲ್ಲ. ಹೀಗಾಗಿ ಹೂಡಿಕೆದಾರರಿಗೆ ಚಿನ್ನವೇ ಸುರಕ್ಷಿತ ಮತ್ತು ಲಾಭದಾಯಕ ಹೂಡಿಕೆ ಎಂದೆನಿಸಿದೆ. ಅದರ ಪರಿಣಾಮ ಬಂಗಾರದ ಬೆಲೆ ಏರುತ್ತಲೇ ಇದೆ.
ಇಂದಿನ ಬೆಲೆ
ದೇಶೀಯ ಮಾರುಕಟ್ಟೆಯಲ್ಲಿ ಬುಧವಾರ 24 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 11,864 ರೂಪಾಯಿ ಆಗಿದ್ದು,ಇಂದು ಬರೋಬ್ಬರಿ 120 ರೂಪಾಯಿ ಹೆಚ್ಚಳ ಆಗಿದೆ. 22 ಕ್ಯಾರೆಟ್ ಬೆಲೆಯಲ್ಲಿ 110 ರೂಪಾಯಿ ಹೆಚ್ಚಳ ಆಗಿದ್ದು, 10,875 ರುಪಾಯಿಗೆ ಏರಿಕೆ ಆಗಿದೆ.
10 ಗ್ರಾಂ ಬೆಲೆ
24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಇಂದಿನ ಬೆಲೆಯು 1200 ರೂಪಾಯಿ ಹೆಚ್ಚಳ ಆಗಿ, 1,18,640 ರುಪಾಯಿಗೆ ಹೆಚ್ಚಳ ಆಗಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 1100 ರೂ ಹೆಚ್ಚಳ ಆಗಿ, 1,08,750 ರೂಪಾಯಿಗೆ ಏರಿಕೆ ಆಗಿದೆ.








