ಖ್ಯಾತ ಹಿರಿಯ ಕಲಾವಿದೆ ಕಮಲಶ್ರೀ ಇನ್ನಿಲ್ಲ



(ನ್ಯೂಸ್ಕಡಬ) newskadaba.com,  ಅ.01 : ಕನ್ನಡ ಕಿರುತೆರೆ ಮತ್ತು ಹಿರಿತೆರೆಯಲ್ಲಿ ಹಲವಾರು ವರ್ಷಗಳಿಂದ ಸಕ್ರಿಯವಾಗಿದ್ದ ನಟಿ ಕಮಲಶ್ರೀ ಅವರು ಸೆ.30 ರಾತ್ರಿ ಸಾವನ್ನಪ್ಪಿದ್ದಾರೆ. ಅವರಿಗೆ 70 ವರ್ಷ ವಯಸ್ಸಾಗಿತ್ತು.





ಈಚೆಗೆ ಅವರು ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ. ಅವರ ನಿಧನಕ್ಕೆ ಕನ್ನಡ ಕಿರುತೆರೆ ಲೋಕ ಸಂತಾಪ ಸೂಚಿಸಿದೆ. ಕಮಲಶ್ರೀ ಅವರ ಅಂತ್ಯಕ್ರಿಯೆ ಇಂದು (ಅ.1) ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಡೆಯಲಿದೆ.






ಕಿರುತೆರೆಯಲ್ಲಿ ಅಜ್ಜಿ ಪಾತ್ರಗಳಿಂದ ಫೇಮಸ್ ಆಗಿದ್ದ ನಟಿ ಕಮಲಶ್ರೀ

ಕಮಲಶ್ರೀ ಅವರು ಮೂಲತಃ ರಂಗಭೂಮಿ ಕಲಾವಿದೆ. ಅನೇಕ ಸಿನಿಮಾಗಳಲ್ಲೂ ಬಣ್ಣ ಹಚ್ಚಿರುವ ಅವರು ‘ಗಟ್ಟಿಮೇಳ’ ಸೀರಿಯಲ್ ಜೊತೆಗೆ ‘ಕಾವೇರಿ ಕನ್ನಡ ಮೀಡಿಯಂ’, ‘ಪತ್ತೇದಾರಿ ಪ್ರತಿಭಾ’ ಮುಂತಾದ ಸೀರಿಯಲ್‌ಗಳಲ್ಲೂ ಬಣ್ಣ ಹಚ್ಚಿದ್ದರು. ಅಜ್ಜಿ ಪಾತ್ರಗಳಿಂದ ಫೇಮಸ್ ಆಗಿದ್ದ ಅವರಿಗೆ ಈಚೆಗೆ ಹೆಚ್ಚು ಅವಕಾಶ ಸಿಗುವಂತಹ ಸಂಭವವಿತ್ತು. ಆದರೆ ಅನಾರೋಗ್ಯ ಸಮಸ್ಯೆಯಿಂದಾಗಿ ಹೆಚ್ಚು ನಟನೆ ಮಾಡಲು ಸಾಧ್ಯವಾಗುತ್ತಿರಲಿಲ್ಲ

 

error: Content is protected !!
Scroll to Top