(ನ್ಯೂಸ್ ಕಡಬ) newskadaba.com, ಸೆ. 30 ನವದೆಹಲಿ: ನಾಳೆಯಿಂದ ಭಾರತದಲ್ಲಿ ಹಲವು ಹೊಸ ನಿಯಮಗಳು ಜಾರಿಗೆ ಬರಲಿವೆ. ಯುಪಿಐ ವಹಿವಾಟು ,ರೈಲ್ವೆ ಟಿಕೆಟ್ ಬುಕಿಂಗ್ ,ಎನ್‌ಪಿಎಸ್, ಎಲ್‌ಪಿಜಿ ಬೆಲೆಗಳಿಂದ ಹಿಡಿದು ಆನ್‌ಲೈನ್ ಗೇಮಿಂಗ್‌ವರೆಗೆ ಈ ಬದಲಾವಣೆಗಳು ಸಾಮಾನ್ಯ ಜನರ ಮೇಲೆ ಪರಿಣಾಮ ಬೀರಲಿವೆ.
ಯುಪಿಐ ವಹಿವಾಟು
ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಯುಪಿಐನಲ್ಲಿ ಪೀರ್-ಟು-ಪೀರ್ (P2P) ‘ಕಲೆಕ್ಟ್ ರಿಕ್ವೆಸ್ಟ್’ ಅಥವಾ ‘ಪುಲ್ ಟ್ರಾನ್ಸಾಕ್ಷನ್’ ಸೌಲಭ್ಯವನ್ನು ಅಕ್ಟೋಬರ್ 2 ರಿಂದ ಸ್ಥಗಿತಗೊಳಿಸಲಿದೆ. ಫೋನ್‌ಪೇ, ಗೂಗಲ್ ಪೇ, ಪೇಟಿಎಂನಂತಹ ಯುಪಿಐ ವೇದಿಕೆಗಳಲ್ಲಿ ಈ ಬದಲಾವಣೆ ಜಾರಿಯಾಗಲಿದೆ.
ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್)
ಖಾಸಗಿ ವಲಯದ ಎನ್‌ಪಿಎಸ್ ಚಂದಾದಾರರು ಇನ್ಮುಂದೆ ತಮ್ಮ ಪಿಂಚಣಿ ನಿಧಿಯ 100% ವರೆಗೆ ಈಕ್ವಿಟಿ ಸಂಬಂಧಿತ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದು, ಈ ಹಿಂದಿನ 75%ನಿಂದ 100%ಗೆ ಏರಿಕೆಯಾಗಿದೆ.
ರೈಲ್ವೆ ಟಿಕೆಟ್ ಬುಕಿಂಗ್
ಅಕ್ಟೋಬರ್ 1 ರಿಂದ ಭಾರತೀಯ ರೈಲ್ವೆಯು ಕಾಯ್ದಿರಿಸುವ ಜನರಲ್ ಟಿಕೆಟ್‌ಗಳ ಬುಕಿಂಗ್‌ಗೆ ಆಧಾರ್ ದೃಢೀಕೃತ ಬಳಕೆದಾರರಿಗೆ ಆದ್ಯತೆ ನೀಡಲಿದೆ. ರಿಸರ್ವೇಷನ್ ತೆರೆದ ಮೊದಲ 15 ನಿಮಿಷಗಳಲ್ಲಿ ಕೇವಲ ಆಧಾರ್ ದೃಢೀಕರಣಗೊಂಡವರು IRCTC ವೆಬ್‌ಸೈಟ್ ಆ್ಯಪ್ ಮೂಲಕ ಟಿಕೆಟ್ ಬುಕ್ ಮಾಡಬಹುದು.








