(ನ್ಯೂಸ್ ಕಡಬ) newskadaba.com, ಸೆ. 30 ಕಾಸರಗೋಡು : ಗಾಂಜಾ ಕಳ್ಳಸಾಗಣೆ ಮಾಡುತ್ತಿದ್ದ ಆರೋಪಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ, 1 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಶಿಕ್ಷೆಗೆ ಒಳಗಾದ ವ್ಯಕ್ತಿಯು ವೆಲ್ಲರಿಕುಂಡು ತಾಲೂಕಿನ ಭೀಮನಡಿ ಕುನ್ನಂಗೈ ನಿವಾಸಿ ನೌಫಲ್ ಕೆ. ಕೆ. ಆಗಿದ್ದಾನೆ. ದಂಡ ಪಾವತಿಸಲು ವಿಫಲವಾದರೆ, ಆತನು ಹೆಚ್ಚುವರಿಯಾಗಿ 3 ತಿಂಗಳ ಸೆರೆವಾಸವನ್ನು ಅನುಭವಿಸಬೇಕು ಎಂದು ನ್ಯಾಯಾಧೀಶೆ ಕೆ. ಪ್ರಿಯಾ ಅವರು ತೀರ್ಪು ನೀಡಿದ್ದಾರೆ.ಇದೇ ವೇಳೆ, ಪ್ರಕರಣದ ಎರಡನೇ ಮತ್ತು ಮೂರನೇ ಆರೋಪಿಗಳಾದ ಕುರಂಜೆರಿ ಮರಿತ್ ಪರಂಬಿಲ್ನ ರೋನಿ ವರ್ಗೀಸ್ ಮತ್ತು ಸಮೀರ್ ಅಲಿಯಾಸ್ ಮುಳಗಪೋಡಿ ಸಮೀರ್ ಅವರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ.
ಈ ಪ್ರಕರಣವು 2019ರ ಫೆಬ್ರವರಿ 3 ರಂದು ದಾಖಲಾಗಿತ್ತು. ಅಂದು ಚಿತ್ತಾರಿಕಲ್ ಪೊಲೀಸರು ತಮ್ಮ ಠಾಣಾ ವ್ಯಾಪ್ತಿಯಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 112 ಕೆಜಿ ಗಾಂಜಾವನ್ನು ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದರು.








