ಎಸ್ಕೆಎಸ್ಸೆಸ್ಸೆಫ್ ಮತ್ತು ಬ್ಲಡ್ ಡೋನರ್ಸ್ ಮಂಗಳೂರು ಸಹಭಾಗಿತ್ವ ► ಕಲ್ಲಡ್ಕದಲ್ಲಿ ಬೃಹತ್ ರಕ್ತದಾನ ಶಿಬಿರ ಹಾಗೂ ಸನ್ಮಾನ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಮಂಗಳೂರು, ಎ.23. ಎಸ್ಕೆಎಸ್ಸೆಸ್ಸೆಫ್ ಕಲ್ಲಡ್ಕ ಕ್ಲಸ್ಟರ್ ಮತ್ತು ಬ್ಲಡ್ ಡೋನರ್ಸ್ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಎ.ಜೆ. ಆಸ್ಪತ್ರೆ ಮಂಗಳೂರು ಇದರ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರ ಹಜಾಜ್ ಸ್ಪೋರ್ಟ್ಸ್ ಕ್ಲಬ್ ಗೋಳ್ತಮಜಲು ಇದರ ಸಭಾಂಗಣದಲ್ಲಿ ನಡೆಯಿತು.

ಎಸ್ಕೆಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಖಾಸಿಂ ದಾರಿಮಿ ಕಿನ್ಯ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಲ್ಲಡ್ಕ ಖತೀಬರಾದ ಇಸ್ಮಾಯಿಲ್ ಫೈಝಿ ದುವಾಃ ನೆರವೇರಿಸಿದರು. ಸ್ವಾಗತ ಭಾಷಣವನ್ನು ಸದಕತುಲ್ಲಾಹ್ ಮುಸ್ಲಿಯಾರ್ ಹಾಗೂ ಅಧ್ಯಕ್ಷತೆಯನ್ನು ಕೆ. ಅಶ್ರಫ್ ಮಾನಿಮಜಲು ವಹಿಸಿದ್ದರು. ಸಮಾಜವನ್ನು ತಮ್ಮ ಉತ್ತಮ ಸಂದೇಶಗಳ ಮೂಲಕ ಮುನ್ನಡೆಸುವಂತಹ ವಿದ್ವಾಂಸರು ಶಿಬಿರದ ಮುಂಚೂಣಿಯಲ್ಲಿ ನಿಂತು ರಕ್ತದಾನ ಮಾಡಿ ಮಾದರಿಯಾದರು.

ಕಲ್ಲಡ್ಕ ಹಾಗೂ ಆಸುಪಾಸಿನ ಹಲವಾರು ಎಸ್ಕೆಎಸ್ಸೆಸ್ಸೆಫ್ ಅಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳು ಬಹಳ ಮುತುವರ್ಜಿಯಿಂದ ಇಂತಹ ಸಮಾಜಸೇವೆಯಲ್ಲಿ ಭಾಗವಹಿಸಿ ಸಂಘಟನಾ ಮಹತ್ವವನ್ನು ಅದರ ಬಾಧ್ಯತೆಗಳನ್ನು ತಿಳಿಸಿಕೊಡುವಲ್ಲಿ ಮಾದರಿಯಾದರು. ಎ.ಜೆ. ಆಸ್ಪತ್ರೆ ಮಂಗಳೂರು ಇದರ ಬ್ಲಡ್ ಬ್ಯಾಂಕ್ ಉಸ್ತುವಾರಿ ಗೋಪಾಲ ಕೃಷ್ಣ ರಕ್ತದಾನದ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಎಸ್ಕೆಎಸ್ಸೆಸ್ಸೆಫ್ ಕಲ್ಲಡ್ಕ ಕ್ಲಸ್ಟರ್ ವತಿಯಿಂದ ಬ್ಲಡ್ ಡೊನರ್ಸ್ ಮಂಗಳೂರು ಇದರ ಸೇವೆಯನ್ನು ಗುರುತಿಸಿ ಇಮ್ರಾನ್ ಉಳ್ಳಾಲ ಇವರನ್ನು ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

Also Read  ಕಾಸರಗೋಡು: 22 ಕೆ.ಜಿ. ಗಾಂಜಾ ಸಾಗಾಟ, ವಶ

ಬ್ಲಡ್ ಡೊನರ್ಸ್ ಮಂಗಳೂರು ಇದರ ವತಿಯಿಂದ ಸಿದ್ದಿಕ್ ಮಂಜೇಶ್ವರ, ಇಮ್ರಾನ್ ಉಳ್ಳಾಲ, ಮುಸ್ತಫಾ ಕೆ ಸಿ ರೋಡ್ ಹಾಗೂ ನೌಷಾದ್ ಕರ್ನಿರೆ, ಅರ್ಷದ್ ಸರಾವ್, ಜಮಾಲ್ ಸರಾವ್,ನೌಷಾದ್ ಕಲ್ಪನೆ ಎಂ. ಫ್ರೆಂಡ್ಸ್ ಅಧ್ಯಕ್ಷರಾದ ಹನೀಫ್ ಹಾಜೀ ಗೋಳ್ತಮಜಲು ಹಾಜರಿದ್ದರು. ಈ ರಕ್ತದಾನ ಶಿಬಿರದಲ್ಲಿ 100 ಕ್ಕೂ ಅಧಿಕ ಮಂದಿ ರಕ್ತದಾನ ಮಾಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಅಬ್ದುಲ್ ಹಮೀದ್ ಗೋಳ್ತಮಜಲು ಕಾರ್ಯಕ್ರಮವನ್ನು ನಿರೂಪಿಸಿದರು.

Also Read  ಮುಂದುವರಿದ ಕೊರೋನಾ ಅಟ್ಟಹಾಸ ➤ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಆದೇಶ

ವರದಿ: ಬ್ಲಡ್ ಡೋನರ್ಸ್ ಮಂಗಳೂರು

 

error: Content is protected !!
Scroll to Top