ರೌಡಿ ಶೀಟರ್ ಸೈಫುದ್ದೀನ್ ನನ್ನು ಉಡುಪಿಯ ಮಲ್ಪೆಯಲ್ಲಿ ಗುಂಡಿಕ್ಕಿ ಹತ್ಯೆ



(ನ್ಯೂಸ್ಕಡಬ) newskadaba.com,  ಸೆ. 27 ಉಡುಪಿ: ಮಲ್ಪೆಯಲ್ಲಿ ರೌಡಿ ಶೀಟರ್ ಸೈಫುದ್ದೀನ್ ನನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಸೆಪ್ಟೆಂಬರ್ 27 ರ ಶನಿವಾರ ಬೆಳಕಿಗೆ ಬಂದಿದೆ.





ಮಣಿಪಾಲ ಮೂಲದ ಸಾರಿಗೆ ವ್ಯವಹಾರದಲ್ಲಿಯೂ ತೊಡಗಿಸಿಕೊಂಡಿದ್ದ ಸೈಫುದ್ದೀನ್ ಮೇಲೆ ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ  ಎಂದು ವರದಿಯಾಗಿದೆ






.ಆತನ ಮೇಲೆ ಗುಂಡು ಹಾರಿಸಿದ ನಂತರ, ದಾಳಿಕೋರರು ಆತನ ಮೇಲೆ ಮತ್ತಷ್ಟು ಹಲ್ಲೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು.

error: Content is protected !!
Scroll to Top