ರಾಜ್ಯ ಪ್ರೌಢಶಿಕ್ಷಣ ಮಂಡಳಿಯ ಚಿತ್ರಕಲಾ ಪರೀಕ್ಷೆ 2017-18 ► ಸೈಂಟ್ ಜೋಕಿಮ್ಸ್‌, ಸೈಂಟ್ ಆನ್ಸ್‌, ಸರಸ್ವತಿ ಶಾಲೆಗಳಿಗೆ ಶೇಕಡ 100 ಫಲಿತಾಂಶ

(ನ್ಯೂಸ್ ಕಡಬ) newskadaba.com ಕಡಬ, ಎ.22. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷೆ ಮಂಡಳಿಯ 2017-18ನೇ  ಸಾಲಿನ ಚಿತ್ರಕಲಾ ಗ್ರೇಡ್ ಪರೀಕ್ಷೆಗಳಲ್ಲಿ ಲೋಯರ್ ಮತ್ತು ಹೈಯರ್ ಗ್ರೇಡ್ ವಿಭಾಗದಲ್ಲಿ, ಕಡಬ ಸೈಂಟ್ ಜೋಕಿಮ್ಸ್, ಸೈಂಟ್ ಆನ್ಸ್‌, ಸರಸ್ವತಿ ವಿದ್ಯಾಲಯ, ಸ್ಯಾಂತೋಮ್ ಪ್ರೌಢ ಶಾಲೆ, ಬೆಸ್ಟ್‌ ಕುರಿಯಕ್ರೋಸ್ ಪ್ರೌಢಶಾಲೆ, ವಿದ್ಯಾಬೋಧಿನಿ ಬಾಳಿಲ ಪ್ರಗತಿ ಪ್ರೌಢಶಾಲೆ, ಸರ್ಕಾರಿ ಪ್ರೌಢಶಾಲೆ ಏನೆಕಲ್, ಸರ್ಕಾರಿ ಪ್ರೌಡಶಾಲೆ ಎಡಮಂಗಲ ಈ ಎಲ್ಲಾ ಶಾಲೆಗಳಿಗೆ ಶೇಕಡ 100 ಫಲಿತಾಂಶ ಲಭಿಸಿದೆ.

ಸೈಂಟ್ ಜೋಕಿಮ್ಸ್‌ ಪ್ರೌಢಶಾಲೆ ಕಡಬ:
ಲೋಯರ್ ಗ್ರೇಡ್ ವಿಭಾಗದಲ್ಲಿ ಒಟ್ಟು 31 ವಿದ್ಯಾರ್ಥಿಗಳು ಹಾಜರಾಗಿದ್ದ ಅಂಜಲಿ ಕೆ.ಜೆ, ಸ್ವಾತಿ, ವಿಜೇತ್ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದು. ಹದಿನೈದು  ಪ್ರಥಮ ಶ್ರೇಣಿಯಲ್ಲಿ ಹಾಗೂ ಹದಿಮೂರು ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತಿರ್ಣರಾಗಿದ್ದಾರೆ. ಹೈಯರ್ ಗ್ರೇಡ್ ವಿಭಾಗದಲ್ಲಿ ಒಟ್ಟು 46 ವಿದ್ಯಾರ್ಥಿಗಳು ಪರೀಕ್ಷೆ ಹಾಜರಾಗಿದ್ದು ಆಯಿಷತ್ ಸಫೀದಾ, ಮಾನಸ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದು ಹದಿನೆಂಟು ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ ಇಪ್ಪತ್ತಾರು ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತಿರ್ಣರಾಗಿದ್ದಾರೆ.

ಸೈಂಟ್ ಆನ್ಸ್‌ ಕಡಬ:
ಲೋಯರ್ ಗ್ರೇಡ್ ವಿಭಾಗದಲ್ಲಿ ಒಟ್ಟು ಏಳು ಮಂದಿ ವಿದ್ಯಾರ್ಥಿಗಳು ಹಾಜರಾಗಿದ್ದು ಅಪೇಕ್ಷ ಕುಂದರ್ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದು ನಾಲ್ಕು  ಪ್ರಥಮ ಶ್ರೇಣಿಯಲ್ಲಿ ಎರಡು ಮಂದಿ ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತಿರ್ಣರಾಗಿದ್ದಾರೆ. ಹೈಯರ್ ಗ್ರೇಡ್ ವಿಭಾಗದಲ್ಲಿ ಒಟ್ಟು 13 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಕಡಬ ತಾಲೂಕಿಗೆ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿ ಶಮಿತಾ ಕೆ ಹಾಗೂ ವಿಶಿಷ್ಟ ಶ್ರೇಣಿಯಲ್ಲಿ  ಶ್ರೇಯಸ್ ಕೆ., ಸುಷ್ಮಾ ಎಮ್.ಕೆ ಪ್ರತಿಕ್ಷಾ ಪಿ. ಮತ್ತು ಏಳು ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ 2 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತಿರ್ಣರಾಗಿದ್ದಾರೆ.

Also Read  ಪೊಳಲಿ: ಶ್ರಿ ರಾಜಾರಾಜೇಶ್ವರಿ ಸನ್ನಿಧಿಯಲ್ಲಿ ► ಕೆನರಾ ಇಂಜಿನೀಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಂದ ಕರಸೇವೆ

ಬೆಸ್ಟ್‌ ಕುರಿಯಕೋಸ್ ಪ್ರೌಢಶಾಲೆ ಗುತ್ತಿಗಾರು: 
ಲೋಯರ್ ಗ್ರೇಡ್ ವಿಭಾಗದಲ್ಲಿ ಒಟ್ಟು 2 ಮಂದಿ ವಿದ್ಯಾರ್ಥಿಗಳು ಹಾಜರಾಗಿದ್ದು ವರ್ಷ ಎಚ್, ಸ್ವಾತಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಹೈಯರ್ ಗ್ರೇಡ್ ವಿಭಾಗದಲ್ಲಿ ಒಟ್ಟು 3 ಮಂದಿ ವಿದ್ಯಾರ್ಥಿಗಳು ಹಾಜರಾಗಿದ್ದು, ವಿನೋದ್ ಕೆ. ಶ್ರೀ ವಿದ್ಯಾ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದು ಓರ್ವ ವಿದ್ಯಾರ್ಥಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ಸರಸ್ವತಿ ವಿದ್ಯಾಲಯ ಕಡಬ:
ಲೋಯರ್ ಗ್ರೇಡ್ ವಿಭಾಗದಲ್ಲಿ ಒಟ್ಟು ಓರ್ವ ವಿದ್ಯಾರ್ಥಿನಿ ಹಾಜರಾಗಿದ್ದು ರಶ್ಮಿ ಜೆ ಕಡಬ ತಾಲೂಕಿನ ಲೋಯರ್ ವಿಭಾಗದ ಪ್ರಥಮ ಸ್ಥಾನ ಪಡೆದಿದ್ದಾಳೆ.

ವಿದ್ಯಾಬೋದಿನಿ ಪ್ರೌಢಶಾಲೆ ಬಾಳಿಲ:
ಲೋಯರ್ ವಿಭಾಗದಲ್ಲಿ ಓರ್ವ ವಿದ್ಯಾರ್ಥಿನಿ ಹಾಜರಾಗಿದ್ದು ಚರಿತಾ ಎ.ವಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾಳೆ. ಹೈಯರ್ ಗ್ರೇಡ್ ವಿಭಾಗದಲ್ಲಿ ಓರ್ವ ವಿದ್ಯಾರ್ಥಿನಿ ಹಾಜರಾಗಿದ್ದು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾಳೆ.

Also Read  ಉಳ್ಳಾಲ: ಕಾಂಗ್ರೆಸ್ ಪ್ರಚಾರದ ವಾಹನ ಚಾಲಕನಿಗೆ ಹಲ್ಲೆ ➤ ಎಸ್ಡಿ ಪಿಐ ಕಾರ್ಯಕರ್ತನ ಬಂಧನ

ಸ್ಯಾಂತೋಮ್ ವಿದ್ಯಾನಿಕೇತನ್ ರೆಂಜಿಲಾಡಿ:
ಹೈಯರ್ ಗ್ರೇಡ್ ವಿಭಾಗದಲ್ಲಿ ಸಿಂಚನಾ ಅಮಿನ್ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾಳೆ.

ಪ್ರಗತಿ ಪ್ರೌಢಶಾಲೆ ಕಾಣಿಯೂರು:
ಲೋಯರ್ ಗ್ರೇಡ್ ವಿಭಾಗದಲ್ಲಿ ಶಾಯಿರಿನ್ ಬಾನು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾಳೆ.

ಸರ್ಕಾರಿ ಪ್ರೌಢಶಾಲೆ ಏನೆಕಲ್:
ಲೋಯರ್ ಗ್ರೇಡ್ ವಿಭಾಗದಲ್ಲಿ ಅನಂತ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾನೆ.

ಸರ್ಕಾರಿ ಪ್ರೌಢಶಾಲೆ ಎಡಮಂಗಲ:
ಹೈಯರ್ ಗ್ರೇಡ್ ವಿಭಾಗದಲ್ಲಿ ಓರ್ವ ವಿದ್ಯಾರ್ಥಿ ಪರೀಕ್ಷೆ ಹಾಜರಾಗಿದ್ದು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಈ ಎಲ್ಲಾ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಸೈಂಟ್ ಜೋಕಿಮ್ಸ್‌ ಶಿಕ್ಷಣ ಸಂಸ್ಥೆಯ ಚಿತ್ರಕಲಾ ಶಿಕ್ಷಕ ಸತೀಶ್ ಪಂಜ  ಚಿತ್ರಕಲಾ ಪರೀಕ್ಷೆಗೆ ತರಬೇತಿಯನ್ನು ನೀಡಿರುತ್ತಾರೆ.

error: Content is protected !!
Scroll to Top