(ನ್ಯೂಸ್ ಕಡಬ) newskadaba.com, ಸೆ.26 ಮಂಜೇಶ್ವರ : ಶಾಲಾ ಮೇಲ್ಛಾವಣಿ ಕುಸಿದು ಬಿದ್ದ ಘಟನೆ ಸೆ.೨೫ರಂದು ಉದ್ಯಾವರ ದಲ್ಲಿರುವ ಕುಂಜತ್ತೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದ್ದು, ತರಗತಿಯಲ್ಲಿ ಮಕ್ಕಳು ಇಲ್ಲದೆ ಇದ್ದುದರಿಂದ ಭಾರೀ ಅಪಾಯ ಸ್ವಲ್ಪದರಲ್ಲೇ ತಪ್ಪಿದೆ . ಬೆಳಿಗ್ಗೆ 8.30 ರ ಸುಮಾರಿಗೆ ಘಟನೆ ನಡೆದಿದೆ
2ನೇ ತರಗತಿಯ ಮೇಲ್ಛಾವಣಿ ಕುಸಿದು ಬಿದ್ದಿದ್ದು, ಈ ಸಮಯದಲ್ಲಿ ಮಕ್ಕಳು ತರಗತಿಗೆ ತಲುಪಿರಲಿಲ್ಲ. ಹಂಚು ಹಾಸಿದ ಶಾಲೆಯ ಕೆಳಗೆ ಅಳವಡಿಸಲಾದ ಸ್ಲಾಬ್ ಕುಸಿದು ಬಿದ್ದಿದೆ . ಸಮೀಪದಲ್ಲಿದ್ದ ಶಾಲಾ ಸಿಬ್ಬಂದಿಗಳು ಅಪಾಯವಿಲ್ಲದೆ ಪಾರಾದರು. ಹಲವು ವರ್ಷಗಳ ಹಳೆಯದಾದ ಈ ಶಾಲಾ ಕಟ್ಟಡ ಪುನರ್ ನಿರ್ಮಿಸಬೇಕು ಎಂಬ ಒತ್ತಾಯ ಹಲವು ಸಮಯಗಳಿಂದ ಕೇಳಿ ಬರುತ್ತಿದೆ.








