ರಕ್ತದ ಕ್ಯಾನ್ಸರ್ ಗೆ ತುತ್ತಾಗಿರುವ ಪೂಜಾಶ್ರೀಗೆ ಧನ ಸಹಾಯ ► ನೊಂದವರಿಗೆ ಬೆಳಕಾಗುತ್ತಿರುವ ಬೆಳ್ಳಾರೆಯ ಜ್ಞಾನದೀಪ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಎ.22. ರಕ್ತದ ಕ್ಯಾನ್ಸರ್ (ಲ್ಯುಕೇಮಿಯಾ) ಗೆ ತುತ್ತಾಗಿ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುಳ್ಯ ತಾಲೂಕಿನ ಬಳ್ಪ ಗ್ರಾಮದ ಹೊಪ್ಪಾಳೆ ನಿವಾಸಿ ಪೂಜಾಶ್ರೀಗೆ ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ಸಂಸ್ಥೆಯು ಸಹಾಯ ಧನ ನೀಡಿ ನೆರವಾಗಿದೆ.

ಸುಬ್ರಹ್ಮಣ್ಯ ಎಸ್.ಎಸ್.ಪಿ.ಯು ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿಯಾಗಿರುವ ಪೂಜಾಶ್ರೀ ಕೆಲವು ಸಮಯಗಳ ಹಿಂದೆ ರಕ್ತದ ಕ್ಯಾನ್ಸರ್ ಗೆ ತುತ್ತಾಗಿ ಇದೀಗ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕೂಲಿ ಕೆಲಸ ಮಾಡಿ ಬದುಕುತ್ತಿರುವ ಪೂಜಾಶ್ರೀಯ ಹೆತ್ತವರು ದಾನಿಗಳ ಸಹಾಯ ಹಸ್ತವನ್ನು ಅಪೇಕ್ಷಿಸಿದ್ದರು‌. ಕಳೆದ ಸುಮಾರು 10 ವರ್ಷಗಳಿಂದ ಸಂಸ್ಥೆಯ ಲಾಭಾಂಶದ ಒಂದು ಭಾಗವನ್ನು ಅನಾರೋಗ್ಯ ಪೀಡಿತರಿಗೆ ಅಥವಾ ಕಡುಬಡತನದಲ್ಲಿರುವ ಕುಟುಂಬಗಳಿಗೆ ಸಹಾಯಧನವಾಗಿ ನೀಡುತ್ತಿರುವ ಬೆಳ್ಳಾರೆಯ ಜ್ಞಾನದೀಪ ಸಂಸ್ಥೆಯ ಆಡಳಿತ ಮಂಡಳಿಯವರು ಪೂಜಾಶ್ರೀ ಚಿಕಿತ್ಸೆ ಪಡೆಯುತ್ತಿರುವ ಫಾದರ್ ಮುಲ್ಲರ್ ಆಸ್ಪತ್ರೆಗೆ ತೆರಳಿ ಸಾಂತ್ವನ ಹೇಳಿ ಸಹಾಯಧನ ವಿತರಿಸಿದರು‌.

Also Read  ಅರಂತೋಡು: ಪ್ರವಾದಿ ಪೈಗಂಬರರ ಜನ್ಮದಿನಾಚರಣೆ ಪ್ರಯುಕ್ತ ಮದರಸ, ವಿದ್ಯಾರ್ಥಿಗಳಿಂದ ಕಲಾ ಸಾಹಿತ್ಯಕ್ಕೆ ಚಾಲನೆ

ಸಂಸ್ಥೆಯ ನಿರ್ದೇಶಕ ಉಮೇಶ್ ಮಣಿಕ್ಕಾರ ಸಹಾಯಧನ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಟ್ರಸ್ಟಿ ಸಂಜಯ್ ನೆಟ್ಟಾರ್, ಉಪನ್ಯಾಸಕ ಗಣೇಶ್ ನಾಯಕ್ ಉಪಸ್ಥಿತರಿದ್ದರು. ಪೂಜಾಶ್ರೀಗೆ ಸಹಾಯ ಮಾಡಲಿಚ್ಛಿಸುವವರು

ಕುಸುಮಾ ಬಿ.ಜೆ (ಪೂಜಾಶ್ರೀ ತಾಯಿ)
A/c No. 01782200080267
IFC Code: SYNB0000178
ಸಿಂಡಿಕೇಟ್ ಬ್ಯಾಂಕ್ ಪಂಜ ಶಾಖೆ

ಅಥವಾ ಆಕೆಯ ತಂದೆ ಜಯಕುಮಾರ್ ದೂರವಾಣಿ ಸಂಖ್ಯೆ 8971126226 ಯನ್ನು ಸಂಪರ್ಕಿಸಬಹುದು.

Also Read  ಮಂಗಳೂರು ಪೊಲೀಸರ ಯಶಸ್ವಿ ಕಾರ್ಯಾಚರಣೆ ► ನಿದ್ರಿಸುತ್ತಿದ್ದ ವ್ಯಕ್ತಿಯ ಕೊಂದ ಆರೋಪಿಗಳ ಬಂಧನ

error: Content is protected !!
Scroll to Top