(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಎ.22. ಕಡಲ ಚಿಪ್ಪನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಪ್ರಕರಣವನ್ನು ಪತ್ತೆಹಚ್ಚಿರುವ ಸಿಸಿಬಿ ಪೊಲೀಸರು ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಕಡಬ ತಾಲೂಕಿನ ನೆಲ್ಯಾಡಿ ನಿವಾಸಿ ಇಸ್ಮಾಈಲ್(40), ನೆಲ್ಯಾಡಿಯ ದೋಂತಿಲ ನಿವಾಸಿ ಜಾರ್ಜ್ ವಿ.ಕೆ. (35), ಅಡ್ಡೂರು ಗ್ರಾಮದ ಕೋಡಿಬೆಟ್ಟು ಮುಹಮ್ಮದ್ ಮನ್ಸೂರ್(27), ಬಡಗುಳಿಪಾಡಿ ಗ್ರಾಮದ ನಾಡಾಜೆ ರಸ್ತೆ ನಿವಾಸಿ ಇಬ್ರಾಹೀಂ(35), ಕಳವಾರು ಗ್ರಾಮದ ಕುಪ್ಪೆಪದವು ಅಟ್ಟಿಪದವು ನಿವಾಸಿ ದಿನೇಶ್ (29), ಪಾವೂರು ಗ್ರಾಮದ ಹರೇಕಳ ಮುಹಮ್ಮದ್ ಮುಖ್ತಾರ್(19), ಕಳವಾರು ಗ್ರಾಮದ ಕುಪ್ಪೆಪದವು ಬೊಳಿಯ ನಿವಾದಿ ಮುಹಮ್ಮದ್ ನೌಶಾದ್ (29) ಎಂದು ಗುರುತಿಸಲಾಗಿದೆ. ಆರೋಪಿಗಳು ನಕಲಿ ಮುತ್ತು ಇರುವ ಕಡಲು ಚಿಪ್ಪನ್ನು ತೋರಿಸಿ ‘‘ತುಂಬಾ ಅದೃಷ್ಟವಾಗಿರುವ ಇದು ಬೆಲೆ ಬಾಳುವಂತದ್ದು. ಮನೆಯಲ್ಲಿ ಇಟ್ಟುಕೊಂಡರೆ ತುಂಬಾ ಸಂಪತ್ತು ಆಗುತ್ತದೆ’’ ಎಂದೆಲ್ಲಾ ಹೇಳಿ ಜನರಿಗೆ ನಂಬಿಸಿ ಮೋಸ ಮಾಡಲು ಮುಂದಾಗಿದ್ದು, ಅದರಂತೆ ನಗರದ ಕುಂಟಿಕಾನದಲ್ಲಿರುವ ಆಸ್ಪತ್ರೆಯೊಂದರ ವಾಹನ ಪಾರ್ಕಿಂಗ್ ಸ್ಥಳದಲ್ಲಿ ಕಡಲ ಚಿಪ್ಪನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.