ಕಡಬ: ಭಾರೀ ಗಾಳಿ ಮಳೆಗೆ ರಸ್ತೆಗೆ ಬಂದು‌ ಬಿದ್ದ ಸಿಮೆಂಟ್ ಶೀಟುಗಳು ► ರಸ್ತೆಗಡ್ಡವಾಗಿ ಬಿದ್ದ ತೆಂಗು, ಅಪಾರ ನಷ್ಟ

(ನ್ಯೂಸ್ ಕಡಬ) newskadaba.com ಕಡಬ, ಎ.19. ಗುರುವಾರ ಸಂಜೆ ಸುರಿದ ಭಾರೀ ಗಾಳಿ ಮಳೆಗೆ ಅಂಗಡಿ ಕಟ್ಟಡದ ಸಿಮೆಂಟ್ ಶೀಟ್, ಹೆಂಚುಗಳು ಸೇರಿದಂತೆ ಅಪಾರ ನಷ್ಟವಾದ ಘಟನೆ ಮರ್ಧಾಳದಲ್ಲಿ‌ ನಡೆದಿದೆ.

ಮರ್ಧಾಳ ಪೇಟೆಯ ಜೈನ ಬಸದಿ ಸಮೀಪದ ತೆಂಗಿನ ಮರ ರಸ್ತೆಗೆ ಬಿದ್ದು, ಕೆಲಕಾಲ ರಸ್ತೆ ತಡೆಯುಂಟಾಗಿತ್ತು. ಆ ಸಮಯದಲ್ಲಿ ಅದೇ ರಸ್ತೆಯ ಮೂಲಕ ತೆರಳುತ್ತಿದ್ದ ಜೀಪೊಂದು ಕೂದಳೆಲೆಯ ಅಂತರದಲ್ಲಿ ಪಾರಾಗಿದೆಯೆನ್ನಲಾಗಿದೆ. ಗಣೇಶ್ ಬೇಕರಿ‌ ಮತ್ತು ಸಾಯಿ ಮೆಡಿಕಲ್ ಕಟ್ಟಡದ ಮೇಲ್ಛಾವಣಿಯ 20 ಕ್ಕೂ ಅಧಿಕ ಸಿಮೆಂಟ್ ಶೀಟುಗಳು ಹಾಗೂ ಹೋಟೆಲ್ ಸ್ಕಂದ ಶ್ರೀ ಕಟ್ಟಡದ ಮೇಲ್ಛಾವಣಿಯ ಹಂಚುಗಳು ಮತ್ತು ಶೀಟುಗಳು ರಸ್ತೆಗೆಸೆಯಲ್ಪಟ್ಟು ಅಪಾರ ನಷ್ಟವುಂಟಾಗಿದೆ. ಸಂಜೀವ ಶೆಟ್ಟಿಯವರ ಮನೆಯ ಸಿಮೆಂಟ್ ಶೀಟೊಂದು ಹಾರಿ‌ ಹೋಗಿದ್ದರಿಂದಾಗಿ ಮನೆಯಲ್ಲಿ ಶೇಖರಿಸಿಟ್ಟಿದ್ದ ಅಡಿಕೆ ನಾಶವಾಗಿದೆ. ಇನ್ನುಳಿದಂತೆ ಕಡಬ ತಾಲೂಕಿನಾದ್ಯಂತ ಭಾರೀ ಗುಡುಗಿನೊಂದಿಗೆ ಅಪಾರ ಮಳೆಯಾಗಿದೆ.

Also Read  ಕರಾವಳಿ ಜಿಲ್ಲೆಗಳಲ್ಲಿ ಆಗಸ್ಟ್ 23ರ ವರೆಗೆ ಯೆಲ್ಲೊ ಅಲರ್ಟ್ ಘೋಷಣೆ

error: Content is protected !!
Scroll to Top