ಸೌತೆಕಾಯಿಯ ಸ್ಯಾಂಡ್ ವಿಚ್

(ನ್ಯೂಸ್ ಕಡಬ) newskadaba.com ಎ.19.

ಬೇಕಾಗುವ ಸಾಮಾಗ್ರಿಗಳು :

  • ಬ್ರೆಡ್( 4-6 ತುಂಡು)
  • ಸೌತೆಕಾಯಿ( 1)
  • ಬೆಣ್ಣೆ( 2 ಚಮಚ)
  • ಚೀಸ್( ಸ್ವಲ್ಪ)
  • ಚಾಟ್ ಮಸಾಲ ಪುಡಿ(ಚಿಟಿಕೆಯಷ್ಟು)
  • ಕರಿ ಮೆಣಸಿನ ಪುಡಿ(ಚಿಟಿಕೆಯಷ್ಟು)
  • ಉಪ್ಪು( ರುಚಿಗೆ ತಕ್ಕಷ್ಟು)

ಮಾಡುವ ವಿಧಾನ:
ಸೌತೆಕಾಯಿಯನ್ನು ವೃತ್ತಾಕಾರದಲ್ಲಿ ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ. ಬ್ರೆಡ್ ನ ಹೊರಗಿನ ಭಾಗವನ್ನು ಕತ್ತರಿಸಿ ಬ್ರೆಡ್ಗೆ ಬೆಣ್ಣೆಯನ್ನು ಸವರಿಕೊಳ್ಳಿ. ನಂತರ ಕರಿ ಮೆಣಸಿನ ಪುಡಿ, ಚಾಟ್ ಮಸಾಲ ಪುಡಿ, ಚೀಸ್, ಸೌತೆಕಾಯಿ ತುಂಡುಗಳನ್ನು ಹಾಕಿ, ಇದನ್ನು ಇನ್ನೊಂದು ಬ್ರೆಡ್ನಿಂದ ಕವರ್ ಮಾಡಿಕೊಳ್ಳಿ.
ತವಾವನ್ನು ಬಿಸಿ ಮಾಡಿ ಅದಕ್ಕೆ ಸ್ವಲ್ಪ ಬೆಣ್ಣೆ ಸವರಿಕೊಳ್ಳಿ ನಂತರ ರೆಡಿ ಮಾಡಿ ಇಟ್ಟ ಬ್ರೆಡ್ ನ ಎರಡೂ ಬದಿ ಚೆನ್ನಾಗಿ ರೋಸ್ಟ್ ಮಾಡಿಕೊಳ್ಳಿ. ಈಗ ನಿಮ್ಮ ನೆಚ್ಚಿನ ಸೌತೆಕಾಯಿಯ ಸ್ಯಾಂಡ್ ವಿಚ್ ರೆಡಿ.

Also Read  ಪುರುಷರಲ್ಲಿ ಪರಸ್ತ್ರೀಯರ ಕಂಟಕ ಹೇಗೆ ಬರುತ್ತದೆ ನಿಮ್ಮ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಪಡೆದುಕೊಳ್ಳಿ

error: Content is protected !!
Scroll to Top