ಶ್ರೀ.ಕ್ಷೇ.ಧ.ಗ್ರಾ.ಯೋಜನೆ ಅಡ್ಯನಡ್ಕ ಒಕ್ಕೂಟದ ವತಿಯಿಂದ ಜನತಾ ಶಾಲೆಯಲ್ಲಿ ವಾರ್ಷಿಕೋತ್ಸವ ಆಚರಣೆ



(ನ್ಯೂಸ್ ಕಡಬ) newskadaba.com ಸೆ. 09. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡ್ಯನಡ್ಕ ಒಕ್ಕೂಟದ ಕ್ರೀಡಾಕೂಟ ಹಾಗೂ ವಾರ್ಷಿಕೋತ್ಸವದ ಕಾರ್ಯಕ್ರಮವು ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.





ಧ್ಯೇಯಗೀತೆಯೊಂದಿಗೆ ಪ್ರಾರಂಭಗೊಂಡ ಈ ಕಾರ್ಯಕ್ರಮದ ಉದ್ಘಾಟನೆಯನ್ನು ಈ ವಿದ್ಯಾಸಂಸ್ಥೆಯ ಸಂಚಾಲಕಿ ಶ್ರೀಮತಿ ಡಾ.ಅಶ್ವಿನಿ ಕೃಷ್ಣಮೂರ್ತಿ ಇವರು ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚೆಲ್ಲಡ್ಕ ಪುಷ್ಪಕರ ರೈ ವಹಿಸಿದ್ದರು. ಹಾಗೂ ಮುಖ್ಯ ಅತಿಥಿಗಳಾಗಿ ಕುದ್ದುಪದವು ಶಾಲೆಯ ಶಿಕ್ಷಕ ವಿಠಲ ಜಿ ಹಾಗೂ ವಲಯ ಮೇಲ್ವಿಚಾರಕರಾದ ಶ್ರೀ ಚಂದ್ರಶೇಖರ್ ಇವರು ಭಾಗವಹಿಸಿದ್ದರು. ಅಪರಾಹ್ನ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಗಣೇಶ್ ಮೈರುಗ ವಹಿಸಿದರು. ಉದ್ಘಾಟನೆಗೈದ ವಿಟ್ಲ ತಾಲೂಕು ಯೋಜನಾಧಿಕಾರಿ ಶ್ರೀ ಸುರೇಶ್ ಗೌಡರು, ಒಕ್ಕೂಟದಲ್ಲಿ ನಡೆದ ಬೇರೆ ಬೇರೆ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ, ಯೋಜನೆ ನಡೆದು ಬಂದ ದಾರಿ ಯೋಜನೆಯ ಮೂಲಕ ಎಲ್ಲಾ ಸದಸ್ಯರು ಅಭಿವೃದ್ಧಿ ಹೊಂದಿದ ಬಗ್ಗೆ ವಿವರಿಸಿದರು. ಪುರುಷರಿಗೆ ಹಾಗೂ ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಎಸ್ ಎಸ್ ಎಲ್ ಸಿ, ಪಿಯುಸಿ ಹಾಗೂ ಡಿಗ್ರಿಯಲ್ಲಿ 500ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ ಮಕ್ಕಳನ್ನು ಹಾಗೂ ವಿವಿಧ ಕ್ಷೇತ್ರಗಳಲ್ಲಿ ದುಡಿದ ಮಹನೀಯರನ್ನು ಹಿರಿಯರನ್ನು ಸನ್ಮಾನಿಸಲಾಯಿತು.






ವಾರ್ಷಿಕ ವರದಿಯನ್ನು ಸೇವಾ ಪ್ರತಿನಿಧಿ ಗಾಯತ್ರಿ ಎಸ್ ಇವರು ಮಂಡಿಸಿದರು. ಪುಷ್ಪಕರ ರೈ ಇವರು ಸ್ವಾಗತಿಸಿ, ಶ್ರೀಮತಿ ಕಾವ್ಯ ಧನ್ಯವಾದಗೈದರು. ಶ್ರೀ ಯತೀಶ್ ಉಳಯ ನಿರೂಪಿಸಿದರು.

error: Content is protected !!
Scroll to Top