ಕನ್ನಡದ ವಿದ್ಯಾರ್ಥಿಗಳಿಗೆ ಉರ್ದುವಿನಲ್ಲಿ ಪಾಠ



(ನ್ಯೂಸ್‌ ಕಡಬ) newskadaba.com,  ಸೆ.08 : ಉರ್ದು ಶಿಕ್ಷಕರಿಗೆ ಕನ್ನಡ ಅಥವಾ ಇಂಗ್ಲಿಷ್ ಬಾರದಿರುವುದರಿಂದ, ಅವರು ಉರ್ದು ವಿನಲ್ಲಿಯೇ ಪಾಠ ಮಾಡುತ್ತಾರೆ ಎನ್ನುವುದು ವಿದ್ಯಾರ್ಥಿಗಳ ಆತಂಕ. ಉರ್ದು ಶಿಕ್ಷಕರಿಗೆ ಇಂಗ್ಲಿಷ್ ಸರಿಯಾಗಿ ಬರುವುದಿಲ್ಲ, ಕನ್ನಡವೂ ಗೊತ್ತಿಲ್ಲ. ಅವರು ಉರ್ದುವಿನಲ್ಲಿಯೇ ಪಾಠ ಮಾಡಿದರೆ, ನಮಗೆ ಅರ್ಥವಾಗುವುದಿಲ್ಲ.







ಕೆಲ ವರ್ಷದ ಹಿಂದೆ ರಿಷಭ್ ಶೆಟ್ಟಿ ನಿರ್ದೇಶನದಲ್ಲಿ ‘ಸರಕಾರಿ ಹಿರಿಯ ಪ್ರಾಥಮಿಕ ಶಾಲೆ’ ಎನ್ನುವ ಸಿನಿಮಾ ಭರ್ಜರಿ ಯಶಸ್ಸು ಗಳಿಸಿತ್ತು. ರೀಲ್‌ನಲ್ಲಿ ನಡೆದಿದ್ದ ಘಟನೆಯೇ ಇದೀಗ ರಿಯಲ್ ಲೈಫ್‌ ನಲ್ಲಿ, ಅದರಲ್ಲಿಯೂ ಶಿಕ್ಷಣ ಸಚಿವ ತವರು ಜಿಲ್ಲೆಯಲ್ಲಿಯೇ ನಡೆಯುತ್ತಿದೆ. ಅಲ್ಲಿ ಮಲಯಾಳಂ ಟೀಚರ್ ನಿಂದ ಪಾಠವೆಂದಾದರೆ, ಇಲ್ಲಿ ಉರ್ದು ಶಿಕ್ಷಕರಿಂದ ಪಾಠ ಎನ್ನುವುದಷ್ಟೇ ವ್ಯತ್ಯಾಸ. ಶಿವಮೊಗ್ಗ ಜಿಲ್ಲೆಯ ಹೊಸನಗರದ ಪ್ರೌಢ ಶಾಲೆಯೊಂದರಲ್ಲಿ 330ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇದರಲ್ಲಿ ಐವರು ವಿದ್ಯಾರ್ಥಿಗಳು ಉರ್ದು ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿದ್ದರೆ ಇನ್ನುಳಿದ 325 ವಿದ್ಯಾರ್ಥಿಗಳು ಕನ್ನಡ ಅಥವಾ ಇಂಗ್ಲಿಷ್ ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.






ಈ ಶಾಲೆಯಲ್ಲಿ ಸಮಾಜ ವಿಜ್ಞಾನವನ್ನು ಬೋಧಿಸಲು ತಲಾ ಒಂದೊಂದು ಮಾಧ್ಯಮಕ್ಕೆ ಒಬ್ಬೊಬ್ಬರಂತೆ ಕನ್ನಡ, ಇಂಗ್ಲಿಷ್ ಹಾಗೂ ಉರ್ದುವಿಗೆ ಶಿಕ್ಷಕರಿದ್ದಾರೆ. ಆದರೀಗ ‘ಹೆಚ್ಚುವರಿ’ಯ ನೆಪದಲ್ಲಿ ಆದರೆ ಉರ್ದು ಶಿಕ್ಷಕರಿಗೆ ಕನ್ನಡ ಅಥವಾ ಇಂಗ್ಲಿಷ್ ಬಾರದಿರುವುದರಿಂದ, ಅವರು ಉರ್ದು ವಿನಲ್ಲಿಯೇ ಪಾಠ ಮಾಡುತ್ತಾರೆ ಎನ್ನುವುದು ವಿದ್ಯಾರ್ಥಿಗಳ ಆತಂಕ. ಉರ್ದು ಶಿಕ್ಷಕರಿಗೆ ಇಂಗ್ಲಿಷ್ ಸರಿಯಾಗಿ ಬರುವುದಿಲ್ಲ, ಕನ್ನಡವೂ ಗೊತ್ತಿಲ್ಲ. ಅವರು ಉರ್ದುವಿನಲ್ಲಿಯೇ ಪಾಠ ಮಾಡಿದರೆ, ನಮಗೆ ಅರ್ಥವಾಗುವುದಿಲ್ಲ.

ಇಂಗ್ಲಿಷ್ ಮಾಧ್ಯಮದಲ್ಲಿ ಪಾಠ ಮಾಡಿದರೂ ಗ್ರಾಮೀಣ ಭಾಗದಿಂದ ಬಂದಿರುವ ನಮಗೆ ಪೂರ್ಣ ಪ್ರಮಾಣದಲ್ಲಿ ಅರ್ಥವಾಗುವುದಿಲ್ಲ. ಆದ್ದರಿಂದ ಕನ್ನಡ ಮಾಧ್ಯಮದ ಶಿಕ್ಷಕರನ್ನು ಯಾವುದೇ ಕಾರಣಕ್ಕೂ ವರ್ಗಾಯಿಸಬಾರದು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

 ಕನ್ನಡ ಬೋಧಕರನ್ನು ವರ್ಗಾಯಿಸಲು ಇಲಾಖೆ ಮುಂದಾಗಿರುವುದು ವಿದ್ಯಾರ್ಥಿಗಳ ಆಕ್ಷೇಪಕ್ಕೆ ಕಾರಣವಾಗಿದೆ. ಕನ್ನಡ ಮಾಧ್ಯಮದಲ್ಲಿ ಬೋಧಿಸುವ ಶಿಕ್ಷಕರನ್ನು ವರ್ಗಾಯಿಸಿ, ಅವರ ಬದಲಿಗೆ ಉರ್ದು ಶಿಕ್ಷಕರಿಂದ ಸಮಾಜ ವಿಜ್ಞಾನವನ್ನು ಬೋಧಿಸಲು ಸ್ಥಳೀಯ ಆಡಳಿತ ಹಾಗೂ ಶಾಲೆ ಮುಂದಾಗಿದೆ.

error: Content is protected !!
Scroll to Top