ಬೇಕಾಗುವ ಸಾಮಗ್ರಿಗಳು :
- ಚಾಕಲೇಟ್ ಪುಡಿ(1 ಕಪ್)
- ಸಕ್ಕರೆ(2 ಕಪ್)
- ಹಾಲಿನ ಪುಡಿ(3 ಕಪ್)
- ಬೆಣ್ಣೆ( ½ ಕಪ್)
ಮಾಡುವ ವಿಧಾನ:
ಹಾಲಿನ ಪುಡಿ ಹಾಗು ಚಾಕಲೇಟ್ ಪುಡಿಯನ್ನು ಚೆನ್ನಾಗಿ ಬೆರೆಸಿಕೊಳ್ಳಿ, ನಂತರ ಒಂದು ಪಾತ್ರೆಗೆ ಸ್ವಲ್ಪ ನೀರು ಹಾಕಿ ಕಾಯಲು ಇಡಿ. ನೀರು ಬಿಸಿಯಾದ ನಂತರ ಅದಕ್ಕೆ ಸಕ್ಕರೆ ಸೇರಿಸಿ ಸರಿಯಾಗಿ ಕಲಕಿಸಿ ಕೊಳ್ಳಿ. ಈ ಪಾಕವು ಮಂದವಾಗುತ್ತಾ ಬಂದಾಗ ಅದಕ್ಕೆ ಬೆಣ್ಣೆ ಹಾಗು ಹಾಲಿನ ಪುಡಿ, ಚಾಕಲೇಟ್ ಪುಡಿಯ ಮಿಶ್ರಣವನ್ನು ಹಾಕಿ ಚೆನ್ನಾಗಿ ಕಲಸಿ.ಈ ಮಿಶ್ರಣವನ್ನು ತುಪ್ಪ ಸವರಿ ಇಟ್ಟ ಒಂದು ಪಾತ್ರೆಗೆ ಹಾಕಿ ಸ್ವಲ್ಪ ಹೊತ್ತು ತಣ್ಣಗಾಗಲು ಇಡಿ. ಚಾಕಲೇಟ್ ಗಟ್ಟಿಯಾದ ನಂತರ ಚಾಕುವಿನಲ್ಲಿ ವಿವಿಧ ಆಕಾರಗಳಲ್ಲಿ ಕತ್ತರಿಸಿ ಕೊಳ್ಳಿ. ಈಗ ಮಕ್ಕಳಿಗೆ ಅತೀ ಹೆಚ್ಚು ಪ್ರಿಯವಾದ ಚಾಕಲೇಟ್ ಸವಿಯಲು ಸಿದ್ದ.