ನಕಲಿ ಹಣಕಾಸು ಸಂಸ್ಥೆಯಿಂದ ಹೂಡಿಕೆದಾರರಿಗೆ 93 ಕೋಟಿ ವಂಚನೆ

(ನ್ಯೂಸ್‌ ಕಡಬ) newskadaba.com,  ಸೆ.04 : ನಕಲಿ ಪರಸ್ಪರ ಲಾಭದ ಕಂಪನಿಯ ನಿರ್ದೇಶಕರು ಹೂಡಿಕೆದಾರರಿಗೆ 93 ಕೋಟಿ ರೂ.ಗೂ ಹೆಚ್ಚು ವಂಚನೆ ಮಾಡಿ ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದ ಭದೋಹಿ ನಗರದಲ್ಲಿ ನಡೆದಿದೆ.
ವೆರಿ ವೆಲ್‌ ಮ್ಯೂಚುಯಲ್‌ ಬೆನಿಫಿಟ್‌ ನಿಧಿ ಎಂಬ ಕಂಪನಿ ಆರಂಭಿಸಿ ವಂಚಿಸಿರುವ ಮಹಿಳೆ ಸೇರಿದಂತೆ 15 ನಿರ್ದೇಶಕರ ವಿರುದ್ಧ ಗ್ಯಾನ್‌ಪುರ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೃಪಾ ಶಂಕರ್‌ಅವರ ಪತ್ನಿ ಆಶಾ ದೇವಿ, ಅವರ ಪುತ್ರರಾದ ರವಿ ಆನಂದ್‌, ಅಕ್ಷಯ್‌‍, ಸೂರಜ್‌ ಮತ್ತು ಅಮನ್‌, ಇತರ ನಿರ್ದೇಶಕರಾದ ಸುಹೈಲ್‌ ಅಹದ್‌, ಆನಂದ್‌ ಶ್ರೀವಾಸ್ತವ, ದಯಾ ಶಂಕರ್‌ ವಿಮಲೇಶ್‌ ಮೌರ್ಯ, ರಮೇಶ್‌ ಮೌರ್ಯ, ವೇದ್‌ ಪ್ರಕಾಶ್‌, ರಾಕೇಶ್‌ ವರ್ಮಾ, ಸುಬೇದಾರ್‌ ಪಾಲ್‌ ಮತ್ತು ಸುರೇಶ್‌ ಯಾದವ್‌ ಅವರು ಹೂಡಿಕೆದಾರರಿಗೆ ಸ್ಥಿರ ಠೇವಣಿ ಮತ್ತು ಕಂಪನಿಯ ಹೆಸರಿನಲ್ಲಿ ಲಾಭದಾಯಕ ಯೋಜನೆಗಳ ಮೂಲಕ ತಮ್ಮ ಹಣವನ್ನು ದ್ವಿಗುಣಗೊಳಿಸುವುದಾಗಿ ಭರವಸೆ ನೀಡಿ ಆಮಿಷವೊಡ್ಡಿದ್ದರು.

ಕಂಪನಿಯ ಮುಖ್ಯಸ್ಥೆ ಕೃಪಾ ಶಂಕರ್‌ ಅವರ ಮರಣದ ನಂತರ, ಅವರ ಪತ್ನಿ ಮತ್ತು ಪುತ್ರರು ಇತರ ನಿರ್ದೇಶಕರೊಂದಿಗೆ ಕಾರ್ಯಾಚರಣೆಯನ್ನು ಮುಂದುವರೆಸಿದರು ಮತ್ತು ಸುಮಾರು 93 ಕೋಟಿ ರೂ.ಗಳ ಠೇವಣಿಗಳನ್ನು ಸಂಗ್ರಹಿಸಿದರು ಎಂದು ಆರೋಪಿಸಲಾಗಿದೆ. ಕಳೆದ ಜೂನ್‌ 25 ರಂದು ತಮ ಪರಿಪಕ್ವ ಠೇವಣಿಗಳನ್ನು ಹಿಂಪಡೆಯಲು ಜ್ಞಾನಪುರ ಕಚೇರಿಗೆ ಹೂಡಿಕೆದಾರರು ಬಂದಾಗ ಕಚೇರಿಗೆ ಬೀಗ ಹಾಕಲಾಗಿತ್ತು. ನಂತರ ಪರಿಶೀಲನೆ ನಡೆಸಿದಾಗ ನಿರ್ದೇಶಕರು ಪರಾರಿಯಾಗಿದ್ದಾರೆ ಎಂದು ಪೊಲೀಸ್‌‍ ವರಿಷ್ಠಾಧಿಕಾರಿ ಅಭಿಮನ್ಯು ಮಾಂಗ್ಲಿಕ್‌ ತಿಳಿಸಿದ್ದಾರೆ.

Scroll to Top