ಸವಣೂರು: ಬಿಜೆಪಿ ಅಭ್ಯರ್ಥಿ ಶಾಸಕ ಎಸ್.ಅಂಗಾರರಿಂದ ಕಾರ್ಯಕರ್ತರ ಬೇಟಿ, ಮತಯಾಚನೆ

(ನ್ಯೂಸ್ ಕಡಬ) newskadaba.com ಸವಣೂರು, ಎ.18. ಮುಂಬರುವ ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಹಾಲಿ ಶಾಸಕ ಎಸ್.ಅಂಗಾರ ಅವರು ಸವಣೂರು, ಪುಣ್ಚಪ್ಪಾಡಿ, ಪಾಲ್ತಾಡಿ ಗ್ರಾಮದಲ್ಲಿ ಕಾರ್ಯಕರ್ತರನ್ನು ಬೇಟಿ ಮಾಡಿ ಸಮಾಲೋಚನೆ ನಡೆಸಿ ಮತದಾರರಲ್ಲಿ ಮತಯಾಚಿಸಿದರು.

ಸವಣೂರು ಚಂದ್ರನಾಥ ಬಸದಿಯ ಪದ್ಮಾವತಿ ದೇವಿ ಸನ್ನಿದಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಮತಯಾಚನೆ ನಡೆಸಿದರು. ಸವಣೂರು ಗ್ರಾಮದ ಪರಣೆ, ಪುಣ್ಚಪ್ಪಾಡಿ ಗ್ರಾಮದ ಮುಂಡತ್ತಡ್ಕ, ಸೋಂಪಾಡಿಯಲ್ಲಿ, ಪಾಲ್ತಾಡಿ ಗ್ರಾಮದ ಪಾದೆಬಂಬಿಲ, ಪಂಚೋಡಿಯಲ್ಲಿ ಸಮಾಲೋಚನೆ ಸಭೆ ನಡೆಸಿ ಕಾರ್ಯಕರ್ತರನ್ನು ಬೇಟಿ ಮಾಡಿದರು.

ಈ ಸಂದರ್ಭ ಜಿಲ್ಲಾ ಬಿಜೆಪಿ ಸದಸ್ಯ ರಾಕೇಶ್ ರೈ ಕೆಡೆಂಜಿ, ಜಿ.ಪಂ.ಸದಸ್ಯೆ ಪ್ರಮೀಳಾ ಜನಾರ್ದನ್, ತಾ.ಪಂ.ಉಪಾಧ್ಯಕ್ಷೆ ರಾಜೇಶ್ವರಿ ಕನ್ಯಾಮಂಗಲ, ಬಿಜೆಪಿ ಗ್ರಾ.ಪಂ.ಸಮಿತಿ ಅಧ್ಯಕ್ಷ ಗಣೇಶ್ ಶೆಟ್ಟಿ ಕುಂಜಾಡಿ, ಗ್ರಾಮ ಪಂಚಾಯತ್ ಅಧ್ಯಕ್ಷೆ ಇಂದಿರಾ ಬಿ.ಕೆ, ಸದಸ್ಯರಾದ ಸತೀಶ್ ಅಂಗಡಿಮೂಲೆ, ನಾಗೇಶ್ ಓಡಂತರ್ಯ, ಮಾಜಿ ಸದಸ್ಯ ಮೋಹನ್ ದೇವಾಡಿಗ, ವಿಶಾಕ್ ರೈ ತೋಟದಡ್ಕ, ಜನಾರ್ಧನ ಗೌಡ ಪುಣ್ಚಪ್ಪಾಡಿ, ಶಶಿದರ ಓಡಂತರ್ಯ,ಚಂದಪ್ಪ, ಸುಂದರ, ಬಾಬು ಐತ್ತಪ್ಪ, ಧನರಾಜ್, ದಕ್ಷಿತ್ ರಾಜ್, ಅವಿನಾಶ್, ಆನಂದ ಓಡಂತರ್ಯ, ಶ್ರೀನಿವಾಸ, ವಿಶ್ವ, ಜಾನಕಿ, ಪುಷ್ಪಲತಾ, ಗಿರಿಜಾ , ಲಕ್ಷ್ಮಿ, ಶೇಖರ್, ದೇವಪ್ಪ , ಎಪಿಎಂಸಿ ನಿರ್ದೇಶಕ ದಿನೇಶ್ ಮೆದು, ಮಾಜಿ ನಿರ್ದೇಶಕ ಸೋಮನಾಥ ಕನ್ಯಾಮಂಗಲ, ಸವಣೂರು ಸಿಎ ಬ್ಯಾಂಕ್ ನಿರ್ದೇಶಕ ತಾರಾನಾಥ ಕಾಯರ್ಗ, ಮಂಜುನಾಥನಗರ ಸಿದ್ದಿವಿನಾಯಕ ಸೇವಾ ಸಂಘದ ಕಾರ್ಯದರ್ಶಿ ಉದಯ ಬಿ.ಆರ್,ಜಗದೀಶ್ ಇಡ್ಯಾಡಿ, ಸತ್ಯಪ್ರಕಾಶ್ ರೈ, ಶ್ರೇಯಸ್ ರೈ ಬರೆಮೇಲು, ಹರೀಶ್ ರೈ ಮಂಜುನಾಥನಗರ, ಮುರಳಿಶ್ರೀರಾಮ್, ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಪದ್ಮಪ್ರಸಾದ್ ಆರಿಗ ಪಂಚೋಡಿ, ಹೊನ್ನ್ಪ್ಪಪ್ಪ ಗೌಡ ಜಾರಿಗೆತ್ತಡಿ, ಲೋಕಯ್ಯ ಗೌಡ ಅಂಗಡಿಮೂಲೆ, ಜಯಾನಂದ ಗೌಡ ಜಾರಿಗೆತ್ತಡಿ, ಬಾಲಕೃಷ್ಣ ಗೌಡ ಕೊಡತ್ತೋಡಿ, ವಿಶ್ವನಾಥ ಗೌಡ, ಹರೀಶ್ ಅಂಗಡಿಮೂಲೆ, ಅವಿನಂದ ಅಂಗಡಿಮೂಲೆ, ವಿಜಯ ಬಿ.ಜೆ ಜಾರಿಗೆತ್ತಡಿ, ಸಚಿನ್ ಅಂಗಡಿಮೂಲೆ, ರಾಮಕೃಷ್ಣ ಪ್ರಭು ಸವಣೂರು ಮೊದಲಾದವರಿದ್ದರು.

Also Read  ಪಾಲ್ತಾಡಿ: ಬಿಜೆಪಿ ಅಭಿಯಾನ

 

error: Content is protected !!
Scroll to Top