ಕಡಬ, ಎ.17. ಬೈಕೊಂದು ಢಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೋರ್ವರು ಗಾಯಗೊಂಡ ಘಟನೆ ಆಲಂಕಾರು – ಶರವೂರು ರಸ್ತೆಯ ದುರ್ಗಾಂಬಾ ಪದವಿ ಪುರ್ವ ಕಾಲೇಜಿನ ಮುಂಭಾಗದಲ್ಲಿ ಎ.16 ರಂದು ರಾತ್ರಿ ನಡೆದಿದೆ.

ಗಾಯಾಳು ಪಾದಚಾರಿಯನ್ನು ಆಲಂಕಾರು ಗ್ರಾಮದ ಕಜೆ ನಿವಾಸಿ ಸೂರಪ್ಪ ಪುಜಾರಿ ಎಂದು ಗುರುತಿಸಲಾಗಿದೆ. ಇವರು ಸೋಮವಾರದಂದು ತನ್ನ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಶರವೂರು ಕಡೆಯಿಂದ ಬಂದ ಟಿವಿಎಸ್ ವಿಕ್ಟರ್ ಬೈಕು ಢಿಕ್ಕಿ ಹೊಡೆದಿದ್ದು, ಗಾಯಗೊಂಡ ಇವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಅವರ ಪುತ್ರ ಗಣೇಶ್ ಪ್ರಸಾದ್ ನೀಡಿದ ದೂರಿನಂತೆ ಬೈಕ್ ಸವಾರ ಹರಿಪ್ರಸಾದ್ ವಿರುದ್ಧ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
