ಬಿಗ್‌ ಬಾಸ್‌ ಕನ್ನಡ ಸೀಸನ್‌-12 ಆರಂಭಕ್ಕೆ ಡೇಟ್‌ ಫಿಕ್ಸ್‌..!



(ನ್ಯೂಸ್‌ ಕಡಬ) newskadaba.com ಸೆ . 01. ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ ಬಾಸ್‌ ಸೀಸನ್‌ 12 (BBK 12) ಆರಂಭಕ್ಕೆ ಕಾದು ಕುಳಿತವರಿಗೆ ನಟ, ನಿರೂಪಕ ಕಿಚ್ಚ ಸುದೀಪ್‌ ಬಿಗ್‌ ಅಪ್‌ಡೇಟ್‌ ನೀಡಿದ್ದಾರೆ.





ಸೀಸನ್‌ 11ರ ವೇಳೆಗೆ ಇನ್ನುಮುಂದೆ ನಿರೂಪಣೆ ಮಾಡುವುದಿಲ್ಲ ಎಂದು ಹೇಳಿ ಫ್ಯಾನ್ಸ್‌ಗೆ ಶಾಕ್‌ ನೀಡಿದ್ದ ಸುದೀಪ್‌ ಬಳಿಕ ಮನಸ್ಸು ಬದಲಾಯಿಸಿದ್ದರು. ಕಲರ್ಸ್‌ ಕನ್ನಡ ವಾಹಿನಿ, ಬಿಗ್‌ ಬಾಸ್‌ ಆಯೋಜಕರು ಅವರ ಮನವೊಲಿಸುವಲ್ಲಿ ಸಫಲರಾಗಿದ್ದರು. ಇತ್ತೀಚೆಗೆ ಲೋಗೊ ಕೂಡ ರಿಲೀಸ್‌ ಆಗಿತ್ತು. ಇದೀಗ ಸುದೀಪ್‌ ಶೋ ಯಾವಾಗ ಆರಂಭವಾಗಲಿದೆ ಎನ್ನುವ ಪ್ರಶ್ನೆಗೆ, ಕುತೂಹಲಕ್ಕೆ ಉತ್ತರ ನೀಡಿದ್ದಾರೆ.






ಸೆಪ್ಟೆಂಬರ್‌ನಲ್ಲಿ ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಆರಂಭವಾಗುತ್ತದೆ ಎನ್ನುವ ವದಂತಿ ಹರಡಿತ್ತು. ಆದರೆ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರ ಬಿದ್ದಿರಲಿಲ್ಲ. ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸುದೀಪ್‌ ಇದೀಗ ಬಿಗ್‌ ಬಾಸ್‌ ಆರಂಭದ ದಿನಾಂಕವನ್ನು ರಿವೀಲ್‌ ಮಾಡಿದ್ದಾರೆ. ಅಂದುಕೊಂಡಂತೆ ಸೆಪ್ಟೆಂಬರ್‌ನಲ್ಲೇ ಶೋ ಆರಂಭವಾಗಲಿದೆ.

ಆಗಸ್ಟ್ 31ರಂದು ಮೈಸೂರಿಲ್ಲಿ ಆಯೋಜಿಸಿದ್ದ ನಿರ್ಮಾಪಕ, ಉದ್ಯಮಿ, ರಾಜಕಾರಣಿ ಸಂದೇಶ್ ನಾಗರಾಜ್ ಹುಟ್ಟುಹಬ್ಬದ‌ ಕಾರ್ಯಕ್ರಮದಲ್ಲಿ ಸುದೀಪ್‌ ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ಅವರು, ‘ಶೀಘ್ರವೇ ತೆರೆ ಮೇಲೆ ಬರಲಿದ್ದೇನೆ. ಸೆಪ್ಟೆಂಬರ್ 28ರಿಂದ ಕಿರುತೆರೆಗೆ ಬರಲಿದ್ದೇನೆ. ಆಶೀರ್ವಾದ ಮಾಡಿʼ ಎಂದರು. ಆ ಮೂಲಕ ಸೆಪ್ಟೆಂಬರ್‌ 28ರಂದು ಬಿಗ್‌ ಬಾಸ್‌ ಆರಂಭವಾಗುವ ಸೂಚನೆ ನೀಡಿದರು.

error: Content is protected !!
Scroll to Top