(ನ್ಯೂಸ್ ಕಡಬ) newskadaba.com, ಸೆ.01 : ಸುಳ್ಯ ಅರಂತೋಡು ಗ್ರಾಮದ ಅಡ್ತಲೆಯಲ್ಲಿ ತೋಟಗಳಿಗೆ ಕಾಡಾನೆಗಳ ದಾಳಿ ಮುಂದುವರಿದಿದ್ದು, ಬೆಳೆ ನಾಶವಾದ ಘಟನೆ ನಡೆದಿದೆ. ರಾತ್ರಿ ಕಾಡಾನೆಗಳು ತೋಟಗಳಿಗೆ ದಾಳಿ ನಡೆಸಿ ಅಪಾರ ಪ್ರಮಾಣದ ಬೆಳೆಗಳನ್ನು ನಾಶಪಡಿಸಿದೆ.
ಅಡ್ತಲೆ ಯಲ್ಲಿ ದಿನಕೊಂದು ಕಡೆ ಸತತವಾಗಿ 3- 4 ತಿಂಗಳುಗಳಿಂದ ಆನೆ ದಾಳಿ ಮಾಡಿ ಕೃಷಿ ನಾಶ ಮಾಡುತ್ತಿವೆ. ಅಡ್ತಲೆ ಯ ಕಿನಾಲ ಮೋಹನ್ ಅವರ ಆನೆ ಓಡಿಸುವ ಯಂತ್ರದ ಹತ್ತಿರ ಮಾತ್ರ ಬಾರದೆ , ತೋಟದ ಎಲ್ಲಾ ಕಡೆ ಒಡಾಡಿ ಒಂಟಿ ಸಲಗ ಬೆಳೆ ನಾಶ ಮಾಡಿದೆ. ಗುರುಚಾರ ಗಣೇಶ್ ಮಾಸ್ತರ್ ಅಡ್ತಲೆ, ಪ್ರದೀಪ್ ಅಡ್ತಲೆ, ಪ್ರಭಾಕರ ಅಡ್ತಲೆ, ಗಿರೀಶ್ ಅಡ್ತಲೆ, ಅವರ ತೋಟಗಳಿಗೆ ದಾಳಿ ನಡೆಸಿದ ಕಾಡಾನೆಗಳು ಅಡಿಕೆ,ತೆಂಗು , ಬಾಳೆ ಇತರ ಬೆಳೆಗಳನ್ನು ನಾಶಪಡಿಸಿವೆ.









