ಅಕ್ರಮ ಗೋಸಾಗಾಟ ಪತ್ತೆ ►14 ಗೋವುಗಳನ್ನು ವಶಪಡಿಸಿದ ವಿಟ್ಲ ಪೊಲೀಸರು

(ನ್ಯೂಸ್ ಕಡಬ) newskadaba.com ವಿಟ್ಲ, ಜು.05. ಜಿಲ್ಲೆಯಿಂದ ಕೇರಳಕ್ಕೆ ಅಕ್ರಮವಾಗಿ ಜಾನುವಾರುಗಳನ್ನು ಲಾರಿಯೊಂದರಲ್ಲಿ ಸಾಗಿಸುತ್ತಿದ್ದ ಘಟನೆಯನ್ನು ಪತ್ತೆಹಚ್ಚಿರುವ ವಿಟ್ಲ ಪೊಲೀಸರು 14 ಜಾನುವಾರುಗಳನ್ನು ವಶಕ್ಕೆ ಪಡೆದಿದ್ದಾರೆ.

ಕರ್ನಾಟಕದಿಂದ ಜಾನುವಾರುಗಳನ್ನು ಕೇರಳದ ಗೋಶಾಲೆಯ ನೆಪದಲ್ಲಿ ದಾಖಲಿ ಸೃಷ್ಟಿಸಿ ಕಸಾಯಿಖಾನೆಗಳಿಗೆ ಸಾಗಿಸಲಾಗುತ್ತಿದೆ ಎಂಬ ಆರೋಪ ಅನೇಕ ಸಮಯಗಳಿಂದ ಕೇಳಿಬರುತ್ತಿತ್ತು. ಅದರಂತೆ ಇಂದು ಕೇರಳ ನೋಂದಣಿಯ ಈಚರ್ ಲಾರಿಯೊಂದರಲ್ಲಿ 14 ಗೋವುಗಳನ್ನು ಸಾಗಿಸುತ್ತಿದ್ದಾಗ ಕಾರ್ಯಾಚರಣೆ ನಡೆಸಿರುವ ವಿಟ್ಲ ಪೊಲೀಸರು ಲಾರಿ ಸಹಿತ ಗೋವುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

Also Read  ರೈಲಿಗೆ ತಲೆಕೊಟ್ಟು ಯುವಕ ಆತ್ಮಹತ್ಯೆ

error: Content is protected !!
Scroll to Top