ಬಾಯಲ್ಲಿ ನೀರೂರಿಸುವ ಆಲೂ ಪಕೋಡ ಮಾಡುವ ವಿಧಾನ

ಬೇಕಾಗುವ ಸಾಮಗ್ರಿಗಳು :

  • ಹೆಸರು ಕಾಳು( 1 ಕಪ್)
  • ಆಲೂಗಡ್ಡೆ (2-3)
  • ಈರುಳ್ಳಿ(1 ಕಪ್, ಸಣ್ಣಗೆ ಹೆಚ್ಚಿ)
  • ಕಡಲೆ ಹಿಟ್ಟು( ½ ಕಪ್)
  • ಹಸಿ ಮೆಣಸಿನಕಾಯಿ( 2, ಸಣ್ಣದಾಗಿ ಕತ್ತರಿಸಿದ್ದು)
  • ಶುಂಠಿ(ಸ್ವಲ್ಪ, ಸಣ್ಣದಾಗಿ ಕತ್ತರಿಸಿದ್ದು)
  • ಜೀರಿಗೆ(ಅರ್ಧ ಚಮಚ)
  • ಮೆಂತೆ(ಅರ್ಧ ಚಮಚ)
  • ಕೊತ್ತಂಬರಿ ಪುಡಿ(ಸ್ವಲ್ಪ)
  • ನಿಂಬೆ ರಸ(4-5 ಹನಿ)
  • ಉಪ್ಪು(ರುಚಿಗೆ ತಕ್ಕಷ್ಟು)
  • ಇಂಗು(ಸ್ವಲ್ಪ)
  • ಎಣ್ಣೆ

ಮಾಡುವ ವಿಧಾನ:

ಅಡುಗೆ ತಯಾರಿಸುವ 4 ಗಂಟೆ ಮೊದಲು ಹೆಸರು ಕಾಳನ್ನು ನೆನೆಯಲು ಇಡಿ, ಹೀಗೆ 4 ಗಂಟೆಗಳು ಕಳೆದ ನಂತರ ಹೆಸರು ಕಾಳನ್ನು ಚೆನ್ನಾಗಿ ತೊಳೆದು ಮಿಕ್ಸಿಯಲ್ಲಿ ಸ್ವಲ್ಪ ಗಟ್ಟಿಯಾಗಿ ರುಬ್ಬಿಕೊಳ್ಳಿ. ಒಂದು ಪಾತ್ರೆಯಲ್ಲಿ ಆಲುಗಡ್ಡೆಗಳನ್ನು ಹಾಕಿ ಬೇಯಿಸಿಕೊಳ್ಳಿ, ನಂತರ ಆಲುಗಡ್ಡೆಯ ಸಿಪ್ಪೆ ತೆಗೆದು ನಯವಾಗಿ ಹಿಸುಕಿ. ನಂತರ ಹೆಸರು ಕಾಳು ಹಾಗು ಆಲುಗಡ್ಡೆ ಮಿಶ್ರಣ ಮಾಡಿಕೊಂಡು ಅದಕ್ಕೆ ಈರುಳ್ಳಿ, ಹಸಿ ಮೆಣಸಿನಕಾಯಿ, ಶುಂಠಿ, ಜೀರಿಗೆ, ಮೆಂತೆ, ಕೊತ್ತಂಬರಿ ಪುಡಿ, ನಿಂಬೆ ರಸ, ಉಪ್ಪು, ಇಂಗು ಮುಂತಾದವುಗಳನ್ನು ಸೇರಿಸಿ ಉಂಡೆ ಮಾಡಿಕೊಳ್ಳಿ.

ಒಂದು ಪಾತ್ರೆಗೆ ಕಡ್ಲೆ ಹಿಟ್ಟು ಹಾಕಿ ಸ್ವಲ್ಪ ನೀರು ಬೆರೆಸಿ ಗಟ್ಟಿಯಾಗಿ ಕಲಸಿ ಇಟ್ಟುಕೊಳ್ಳಿ, ನಂತರ ಒಂದು ಬಾನಲೆಗೆ ಅರ್ಧದಷ್ಟು ಎಣ್ಣೆ ಹಾಕಿ ಕಾಯಲು ಇಡಿ.ಮಾಡಿ ಇಟ್ಟಿರುವ  ಉಂಡೆಯನ್ನು ಕಡ್ಲೆ ಹಿಟ್ಟಿನಲ್ಲಿ ಮುಳುಗಿಸಿ ಕಾಯಿಸಿ. ಬಿಸಿ ಬಿಸಿಯಾದ ಆಲು ಪಕೋಡ ಚಹಾದೊಂದಿಗೆ ತಿನ್ನಲು ರೆಡಿ.

error: Content is protected !!

Join the Group

Join WhatsApp Group