ನಟಿ ರಮ್ಯಾಗೆ ಅಶ್ಲೀಲ ಸಂದೇಶ: ಬಂಧಿತರ ಸಂಖ್ಯೆ 12ಕ್ಕೆ ಏರಿಕೆ



(ನ್ಯೂಸ್ಕಡಬ) newskadaba.com, ಆಗಸ್ಟ್ 30 : ನಟಿ ರಮ್ಯಾಗೆ ಸಾಮಾಜಿಕ ಜಾಲಾತಾಣದಲ್ಲಿ ಅಶ್ಲೀಲ ಸಂದೇಶ ಕಳಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರ ಸಂಖ್ಯೆ 12 ಕ್ಕೆ ಏರಿಕೆಯಾಗಿದೆ. ಬಂಧಿತರನ್ನು ಸಿಸಿಬಿ ಪೊಲೀಸರು ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಿಕೊಟ್ಟಿದ್ದಾರೆ.





ಬಿಜಾಪುರ, ಚಿತ್ರದುರ್ಗ, ಬೆಂಗಳೂರು ಸೇರಿದಂತೆ ಬೇರೆ ಜಿಲ್ಲೆಗಳಿಂದ 9 ಮಂದಿ ಆರೋಪಿಗಳನ್ನ ಬಂಧಿಸಿದ್ದ ಸಿಸಿಬಿ ಪೊಲೀಸರು ಮತ್ತೆ ಇಬ್ಬರು ಉತ್ತರ ಕರ್ನಾಟಕದ ಮೂಲದ ಯುವಕರನ್ನ ಬಂಧಿಸಿದ್ದಾರೆ. ಬಂಧಿತ ಇಬ್ಬರು ಕೂಡ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದಾರೆಂದು ಎಂದು ಹೇಳಲಾಗಿದೆ.






ನಟಿ ರಮ್ಯಾ ದೂರಿನಲ್ಲಿ ಸುಮಾರು 40 ಕ್ಕೂ ಅಧಿಕ ಅಕೌಂಟ್‌ಗಳ ಡಿಟೈಲ್ಸ್ ಕೊಟ್ಟಿದ್ದು. 12 ಅಕೌಂಟ್‌ಗಳ ಮಾಹಿತಿ ಪಡೆದು 12 ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಜೊತೆಗೆ 10 ಕ್ಕೂ ಹೆಚ್ಚು ಜನರ ಇನ್‌ಸ್ಟಾಗ್ರಾಂ ಖಾತೆಯ ಮಾಹಿತಿ ಪಡೆದಿದ್ದು, ಅವರಿಗಾಗಿ ಶೋಧ ನಡೆಸುತ್ತಿದ್ದಾರೆ.

ಕೆಲವರು ಕೋರ್ಟ್ ಮೊರೆ ಹೋಗಿದ್ದು, ಉಳಿದ ಕೆಲವರು ಅಕೌಂಟ್‌ನಲ್ಲಿ ಹಾಕಿದ್ದ ಕಾಮೆಂಟ್‌ಗಳನ್ನ ಡಿಲೀಟ್ ಮಾಡಿಕೊಂಡು ತಲೆಮರಿಸಿಕೊಂಡಿದ್ದಾರೆ. ಹಾಗಾಗಿ, ಆರೋಪಿತರ ಟವರ್ ಲೊಕೇಷನ್‌ಗಳನ್ನ ಪತ್ತೆ ಮಾಡಿ ಆರೋಪಿಗಳನ್ನು ಪೊಲೀಸರು ಪತ್ತೆಮಾಡಬೇಕಾಗಿದೆ.

error: Content is protected !!
Scroll to Top