(ನ್ಯೂಸ್ ಕಡಬ) newskadaba.com, ಆಗಸ್ಟ್ 30 : ಮಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಬೆಳವಣಿಗೆ ನಡೆಯುತ್ತಿದೆ. ಇದೀಗ, ಎಸ್‌ಐಟಿಗೆ 500 ಪುಟುಗಳ ದಾಖಲೆಯನ್ನು ಗಿರೀಶ್ ಮಟ್ಟಣ್ಣನವರ್ ನೀಡಿದ್ದಾರೆ.
ಧರ್ಮಸ್ಥಳದಲ್ಲಿ ಕೆಲವು ಅಸಹಜ ಸಾವುಗಳ ಸರಿಯಾದ ತನಿಖೆ ನಡೆದಿಲ್ಲ. ಆ ಸಾವುಗಳ ತನಿಖೆ ನಡೆಸಿ ಎಂದು ಗಿರೀಶ್ ಮಟ್ಟಣ್ಣನವರ್, ಎಸ್‌ಐಟಿ ಮುಂದೆ ಮನವಿ ಮಾಡಿದ್ದಾರೆ. ಕಳೆದ 35 ವರ್ಷಗಳಲ್ಲಿ ಧರ್ಮಸ್ಥಳದಲ್ಲಿ ಆಗಿರುವ ಅಸಹಜ ಸಾವುಗಳ ವಿವರವಾದ ದಾಖಲೆ ನೀಡಿದ್ದಾರೆ.
ಈ ಸಾವುಗಳಲ್ಲಿ ಬಹುತೇಕ ಸಾವುಗಳ ತನಿಖೆಯೇ ನಡೆದಿಲ್ಲ. ಧರ್ಮಸ್ಥಳ ಪೊಲೀಸರು ಈ ತನಿಖೆ ನಡೆಸಲು ವಿಫಲರಾಗಿದ್ದಾರೆ. ತನಿಖೆ ನಡೆಸದಿರಲು ಏನು ಕಾರಣ ಎಂಬುದರ ಬಗ್ಗೆ ನಮಗೆ ಅನುಮಾನವಿದೆ ಎಂದು ಎಸ್‌ಐಟಿಗೆ ಕೊಟ್ಟ ದಾಖಲೆಯಲ್ಲಿ ಉಲ್ಲೇಖಿಸಿದ್ದಾರೆ.









