(ನ್ಯೂಸ್ ಕಡಬ) newskadaba.com ಕಡಬ, ಆ. 29. ವ್ಯಕ್ತಿಯೋರ್ವರಿಗೆ ಹುಚ್ಚುನಾಯಿ ಕಡಿದು ಗಂಭೀರ ಗಾಯಗೊಂಡ ಘಟನೆ ಕಡಬ ತಾಲೂಕಿನ ವಿದ್ಯಾನಗರ ಎಂಬಲ್ಲಿ ಶುಕ್ರವಾರದಂದು ನಡೆದಿದೆ.
ಗಾಯಗೊಂಡವರನ್ನು ಕಡಬ ವಿದ್ಯಾನಗರ ನಿವಾಸಿ ಕೊರಗಪ್ಪ ಗೌಡ ಆದ್ರ ಎಂದು ಗುರುತಿಸಲಾಗಿದೆ. ಬೀದಿಯಲ್ಲಿ ಅಲೆದಾಡುತ್ತಿದ್ದ ಹುಚ್ಚು ನಾಯಿಯೊಂದು ಕೊರಗಪ್ಪ ಎಂಬವರಿಗರ ಕಚ್ಚಿದ್ದು, ಕೂಡಲೇ ಅವರನ್ನು ಕಡಬ ಸರಕಾರಿ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿಗೆ ಕೊಂಡೊಯ್ಯುವಂತೆ ವೈದ್ಯರು ಸೂಚಿಸಿದ್ದಾರೆ.
ಆಸ್ಪತ್ರೆಗೆ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಲೀಲಾವತಿ, ಪಟ್ಟಣ ಪಂಚಾಯತ್ ಸದಸ್ಯ ಹನೀಫ್ ಕೆ.ಎಂ. ಸೇರಿದಂತೆ ಹಲವಾರು ಮಂದಿ ತೆರಳಿ ವಿಚಾರಿಸಿದರು.
ಕಡಬ ಭಾಗದಲ್ಲಿ ಬೀದಿ ನಾಯಿಗಳು ಹೆಚ್ಚಿದ್ದರಿಂದ ಸಾರ್ವಜನಿಕರಿಗೆ ಶಾಲಾ ಮಕ್ಕಳಿಗೆ ತೊಂದರೆಯಾಗುತ್ತಿದ್ದು ಈ ಬಗ್ಗೆ ನಾಯಿಗಳ ಉಪಟಳ ನಿವಾರಣೆಗೆ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.








