ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತೆ ಈ ತರಕಾರಿ…



(ನ್ಯೂಸ್‌ ಕಡಬ) newskadaba.com, ಆ.28:‌‌ ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಹಾಗಾಗಿ ರೋಗಗಳು ಬರುವ ಅಪಾಯ ಹೆಚ್ಚು. ಹಾಗಾಗಿ ಆರೋಗ್ಯ ತಜ್ಞರು ಋತುಮಾನದ ಕಾಯಿಲೆಗಳನ್ನು ತಡೆಗಟ್ಟಲು ಕೆಲವು ತರಕಾರಿಗಳನ್ನು ಸೇವನೆ ಮಾಡಲು ಶಿಫಾರಸು ಮಾಡುತ್ತಾರೆ. ಇದಕ್ಕೆ ಪೂರಕವೆಂಬಂತೆ ಹೀರೆಕಾಯಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹಾಗಾದರೆ ಇದರಿಂದ ಸಿಗುವ ಪ್ರಯೋಜನಗಳು ಏನು ಎನ್ನುವುದನ್ನು ತಿಳಿದುಕೊಳ್ಳಿ.





ಹೀರೆಕಾಯಿ ಪೋಷಕಾಂಶಗಳಿಂದ ಸಮೃದ್ದವಾಗಿದ್ದು, ಇದು ವಿಟಮಿನ್ಸಿ, ವಿಟಮಿನ್, ಪೊಟ್ಯಾಸಿಯಂ ಹಾಗೂ ಫೋಲೇಟ್ನಂತಹ ಜೀವಸತ್ವಗಳು ಹಾಗೂ ಖನಿಜಗಳನ್ನು ಹೊಂದಿರುತ್ತದೆ. ಹೀರೆಕಾಯಿಯಲ್ಲಿ ಹೆಚ್ಚಿನ ನೀರಿನಾಂಶವಿದ್ದು, ಕ್ಯಾಲೊರಿಗಳು ಕಡಿಮೆ ಇದೆ. ಹಾಗಾಗಿ ಇದು ಮಳೆಗಾಲದಲ್ಲಿ ದೇಹವನ್ನು ಹಗುರವಾಗಿ ಹಾಗೂ ನಿರ್ವಿಷಗೊಳಿಸುತ್ತದೆ. ಮಳೆಗಾಲದಲ್ಲಿ ಹೀರೆಕಾಯಿ ಸೇವಿಸುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ.






ಮಳೆಗಾಲದಲ್ಲಿ ಸೋಂಕುಗಳು ಹಾಗೂ ವೈರಲ್ರೋಗಗಳ ಅಪಾಯ ಹೆಚ್ಚಾಗಿರುತ್ತವೆ. ಇಂತ ಪರಿಸ್ಥಿತಿಗಳಲ್ಲಿ ಹೀರೆಕಾಯಿಯಂತ ಹಸಿರು ತರಕಾರಿಗಳನ್ನು ಸೇವಿಸುವುದು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಹೀರೆಕಾಯಿಯಲ್ಲಿರುವ ವಿಟಮಿನ್ಸಿ ಹಾಗೂ ಉತ್ಕರ್ಷಣ ನಿರೋಧಕಗಳು ದೇಹದ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ.

ಮಳೆಗಾಲದಲ್ಲಿ ಜೀರ್ಣಕ್ರಿಯೆ ದುರ್ಬಲಗೊಳ್ಳುವುದು ಸಾಮಾನ್ಯವಾಗಿರುತ್ತದೆ. ಆದರೆ, ಹೀರೆಕಾಯಿ ಸೇವಿಸುವುದರಿಂದ ಜೀರ್ಣಕ್ರಿಯೆ ಬಲಗೊಳ್ಳುತ್ತದೆ. ಹೀರೆಕಾಯಿಯಲ್ಲಿರುವ ನಾರು ಮಲಬದ್ದತೆ, ಗ್ಯಾಸ್ಹಾಗೂ ವಾಯು ಮುಂತಾದ ಸಮಸ್ಯೆಗಳನ್ನು ನಿವಾರಿಸುತ್ತದೆ.

ಬೊಜ್ಜಿನಂತಹ ಸಮಸ್ಯೆಗಳಿಂದ ಬಳಲುತ್ತಿರುವವರು ಹೀರೆಕಾಯಿ ಸೇವನೆ ಮಾಡುವುದು ಉತ್ತಮ. ಇದು ಕಡಿಮೆ ಕ್ಯಾಲೋರಿ ಹಾಗೂ ಹೆಚ್ಚಿನ ಫೈಬರ್ಅಂಶವನ್ನು ಹೊಂದಿದ್ದು, ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. ಕಾರಣದಿಂದ ಇದು ತೂಕ ಇಳಿಸಿಕೊಳ್ಳಲು ಪ್ರಯೋಜನಕಾರಿಯಾಗಿದೆ.

ಹೀರೆಕಾಯಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿರುತ್ತದೆ. ಹಾಗಾಗಿ ಮಧುಮೇಹ ರೋಗಿಗಳು ಹೀರೆಕಾಯಿ ಸೇವಿಸುವುದು ಪ್ರಯೋಜನಕಾರಿಯಾಗಿದೆ. ಇದರಲ್ಲಿರುವ ಫೈಬರ್ಅಂಶ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

error: Content is protected !!
Scroll to Top